ಆರಿಕ್ಕಾಡಿಯ ಟೋಲ್ ಮುಚ್ಚಲಿರುವ ಕೇಂದ್ರ ಸರಕಾರದ ತೀರ್ಮಾನ ಜನಪರ ಹೋರಾಟಕ್ಕೆ ಸಂದಜಯ- ಶಾಸಕ ಎಕೆಎಂ ಅಶ್ರಫ್

ಕುಂಬಳೆ: ಆರಿಕ್ಕಾಡಿಯಲ್ಲಿ ಸ್ಥಾಪಿಸಿದ ಜನವಿರುದ್ಧ ಟೋಲ್ ಬೂತ್ ನಿಲುಗಡೆಗೊಳಿಸಿದ ಕೇಂದ್ರ ಸರಕಾರದ ತೀರ್ಮಾನ ಜನಪರ ಹೋರಾಟದ ಜಯವೆಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ನಾಡು ಒಂದಾಗಿ ನಡೆಸಿದ ಜನಪರ ಹೋರಾಟದ ಮುಂದೆ ಮಣಿಯದ ಯಾವುದೇ ಅಧಿಕಾರ ಕೇಂದ್ರಗಳಿಲ್ಲ ವೆಂದು, ಹೈಕೋರ್ಟ್‌ನಲ್ಲಿ ಉಂಟಾದ ಪರಾಮರ್ಶೆಗಳು ಕೇಂದ್ರ ಸರಕಾರದ ನಿಲುವು ತಿದ್ದಲು ಸಹಾಯಕವಾಯಿತೆಂದು ಶಾಸಕರು ನುಡಿದರು. ಜನಪರ ಹೋರಾಟದ ಹೆಸರಲ್ಲಿ ಹಲವಾರು ಮಂದಿ ಕಾರ್ಯಕರ್ತರನ್ನು ಕಸ್ಟಡಿಗೆ ತೆಗೆಯಲಾಗಿದ್ದು, ಕೇಸಿನಲ್ಲಿ ಸಿಲುಕಿಸಿ ಈಗಲೂ ಜೈಲಿನಲ್ಲಿದ್ದಾರೆ. ಇವರಿಗೂ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರಿಗೂ, ಜಿಲ್ಲೆಯ ಶಾಸಕರು ಸಹಿತದ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಎಕೆಎಂ ಅಶ್ರಫ್ ತಿಳಿಸಿದ್ದಾರೆ.

RELATED NEWS

You cannot copy contents of this page