ಉಪ್ಪಳ: ಹೆಂಚು ಹಾಸಿದ ಮನೆಯೊಂದು ಕುಸಿದು ಬಿದ್ದ ಘಟನೆ ಕುಬಣೂರು ಒಡ್ಡಂಬೆಟ್ಟು ಎಂಬಲ್ಲಿ ಜರಗಿದೆ. ಆದರೆ ಅದೃಷ್ಟವಶಾತ್ ಮನೆಯೊಳಗೆ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ. ಕುಬಣೂರು ಒಡ್ಡಂಬೆಟ್ಟುವಿನ ಮಾಣಿಗ ಎಂಬವರ ಮನೆ ನಿನ್ನೆ ಸಂಜೆ ಕುಸಿದು ಬಿದ್ದಿದೆ. ಮಾಣಿಗ ಹಾಗೂ ಪುತ್ರಿ ಲಕ್ಷ್ಮಿ ಇಲ್ಲಿ ವಾಸವಾಗಿದ್ದು, ಆದರೆ ನಿನ್ನೆ ಸಂಜೆ ಇವರು ಮನೆಯಲ್ಲಿಲ್ಲದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ಮನೆಯ ಪಕ್ಕಾಸು, ಹೆಂಚು ಪೂರ್ತಿ ಕುಸಿದು ಬಿದ್ದಿದ್ದು, ಬಡ ಕುಟುಂಬ ಸಂಕಷ್ಟಕ್ಕೀಡಾಗಿದೆ. ಸ್ಥಳಕ್ಕೆ ಪಂಚಾಯತ್ ಮಾಜಿ ಸದಸ್ಯ ಹರಿನಾಥ ಭಂಡಾರಿ, ಬಾಬು ಎಂ. ಕುಬಣೂರು, 19ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಸಾಕ್ಷಿ ಶೆಟ್ಟಿ ಮೀನಾರು, ರಾಮಚಂದ್ರ ಬಲ್ಲಾಳ್, ಹನೀಫ್ ಸಹಿತ ಹಲವರು ಭೇಟಿ ನೀಡಿದರು.







