ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಕಾಸರಗೋಡು ಮೆಡಿಕಲ್ ಕಾಲೇಜು ಪೂರ್ಣ ಸಜ್ಜು-ವಿ.ಡಿ. ಸತೀಶನ್

ಬದಿಯಡ್ಕ:  ಐಕ್ಯರಂಗ ಸರಕಾರ  ಅಧಿಕಾರಕ್ಕೆ ತಲುಪಿದ ಆರು ತಿಂಗಳೊಳಗೆ ಕಾಸರಗೋಡು ಮೆಡಿಕಲ್ ಕಾಲೇಜು ಪೂರ್ಣ ಸಜ್ಜುಗೊಳಿಸಲಾಗುವುದೆಂದು ವಿಪಕ್ಷ ಮುಖಂಡ ವಿ.ಡಿ. ಸತೀಶನ್ ನುಡಿದರು. ಎಂಡೋಸಲ್ಫಾನ್ ಸಂತ್ರಸ್ತರ ವಿರುದ್ಧ ಮುಖಮಾಡಿದ ಆಡಳಿತ ಕೂಟ ಕಳೆದ ಹತ್ತು ವರ್ಷದಿಂದ ರಾಜ್ಯ ಆಡಳಿತ ನಡೆಸುತ್ತಿದೆ. ಆದರೆ ಮುಂದೆ ಎಂಡೋಸಲ್ಫಾನ್ ಸಂತ್ರಸ್ತರನ್ನು ಪರಿಗಣಿಸುವ ಸರಕಾರ ಅಧಿಕಾರಕ್ಕೆ ಬರಲಿದೆಯೆಂದು ಅವರು ನುಡಿದರು. ಕಾಸರಗೋಡು ಮಂಡಲ ಐಕ್ಯಪ್ರಜಾಪ್ರಭುತ್ವ ಒಕ್ಕೂಟ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರವರ ಪ್ರಚಾರ ಮಹಾಸಭೆ ಬದಿಯಡ್ಕದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಮಂಡಲ ಚುನಾವಣಾ ಸಮಿತಿ ಅಧ್ಯಕ್ಷ ಎ. ಗೋವಿಂದನ್ ನಾಯರ್ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಮಾಹಿನ್ ಕೇಳೋಟ್ ಸ್ವಾಗತಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಪ್ರಧಾನ ಭಾಷಣ ಮಾಡಿದರು. ಶಾಸಕ ಎನ್.ಎ ನೆಲ್ಲಿಕುನ್ನು, ಬಾಲಕೃಷ್ಣನ್ ಪೆರಿಯ, ಅಬ್ದುಲ್ಲ ಕುಂಞಿ ಚೆರ್ಕಳ, ಸೋಮಶೇಖರ ಶೇಣಿ, ಕಲ್ಲಟ್ರ ಮಾಹಿನ್, ಅನ್ವರ್ ಓಝೋನ್, ಶ್ಯಾಮ್ ಪ್ರಸಾದ್ ಮಾನ್ಯ ಮಾತನಾಡಿದರು.

You cannot copy contents of this page