ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ: ಮೇ 6ರಂದು ಹೋಟೆಲ್ ಬಂದ್‌ಗೆ ಕರೆ

ತಿರುವನಂತಪುರ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಏರಿಕೆಯನ್ನು ಪ್ರತಿಭಟಿಸಿ ಮೇ ೬ರಂದು ರಾಜ್ಯಾದ್ಯಂತ ಎಲ್ಲಾ ಹೋಟೆಲ್‌ಗಳನ್ನು ಮುಚ್ಚುಗಡೆಗೊಳಿಸಿ ಬಂದ್‌ಗೆ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್  ಅಸೋಸಿಯೇಷನ್ (ಕೆಎಚ್‌ಆರ್‌ಎ) ಕರೆ ನೀಡಿದೆ.

ಬಂದ್‌ನ ಮುನ್ನ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಪ್ರತಿಭಟನೆ ನಡೆಸಲು ಸಂಘಟನೆ ತೀರ್ಮಾನಿಸಿದೆ. ಬಂದ್‌ನ ದಿನದಂದು ಕೇಂದ್ರ, ತೈಲ ಕಂಪೆನಿಗಳ ಮುಂದೆ ಮತ್ತು ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದೆಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ವಾಣಿಜ್ಯ ಬಳಕೆಯ 19 ಕೆಜಿ ಅನಿಲ ಸಿಲಿಂಡರ್ ಬೆಲೆಯನ್ನು 2162 ರೂ.ನಿಂದ ಈಗ 3152 ರೂ.ಗೇರಿಸಲಾಗಿದೆ. ಅಂದರೆ  ಪ್ರತೀ ಸಿಲಿಂಡರ್ ಬೆಲೆಯಲ್ಲಿ ಬರೋಬರಿ 990 ರೂ.ನಷ್ಟು ಏರಿಕೆ ಉಂಟಾಗಿದೆ. ಸಾಮಾನ್ಯವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳದ ಹೊರೆಯನ್ನು ಹೋಟೆಲ್‌ಗಳು ಗ್ರಾಹಕರ ಮೇಲೆ ಹೊರಿಸುತ್ತಾ ಬರುತ್ತದೆ. ಇದರಿಂದಾಗಿ ಹೋಟೆಲ್‌ಗಳ ತಿಂಡಿ ತಿನಿಸುಗಳ ದರವೂ ಇದರ ಜತೆಗೆ ಹೆಚ್ಚಿಸುವುದು ಖಚಿತಗೊಂಡಿದೆ. ಹಲವು ಹೋಟೆಲ್‌ಗಳು ತಿಂಡಿ ತಿನಿಸುಗಳ ಬೆಲೆಯನ್ನು ಈಗಲೇ ಹೆಚ್ಚಿಸಿದೆ. ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕತೊಡಗಿದೆ.

RELATED NEWS

You cannot copy contents of this page