ಬೆಳ್ಳೂರು ಪಂಚಾಯತ್‌ನಲ್ಲಿ ಬಿಜೆಪಿ ನಾಯಕತ್ವ-ಕಾರ್ಯಕರ್ತರ ಮಧ್ಯೆ ಸ್ಪರ್ಧೆ: ಸ್ವತಂತ್ರ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ ನಾಮಪತ್ರ ಸಲ್ಲಿಕೆ

ಮುಳ್ಳೇರಿಯ: ಬಿಜೆಪಿಗೆ ಅಡಿ ಪಾಯ ಭದ್ರವಾಗಿರುವ  ಪಂಚಾ ಯತ್‌ಗಳಲ್ಲಿ ಒಂದಾಗಿರುವ ಬೆಳ್ಳೂರಿ ನಲ್ಲಿ ಈ ಬಾರಿ ಪಕ್ಷ ತೀವ್ರ  ಸವಾಲನ್ನು ಎದುರಿಸುತ್ತಿದೆಯೆಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ. ಚುನಾವಣೆಯಲ್ಲಿ  ಈ ಪಂಚಾಯತ್ ನಲ್ಲಿ ಪಕ್ಷದ ಮುಖಂ ಡರು ಹಾಗೂ ಕಾರ್ಯಕರ್ತರ ಮಧ್ಯೆ ಪ್ರಧಾನ ಸ್ಪರ್ಧೆಯೆಂದು ಇಲ್ಲಿನವರು ತಿಳಿಸುತ್ತಾರೆ. ಅಭ್ಯರ್ಥಿ ನಿರ್ಣಯದಲ್ಲಿ ಉಂಟಾಗಿ ರುವ ವೈಮನಸ್ಸಿನ ಹಿನ್ನೆಲೆಯಲ್ಲಿ ಪಂಚಾಯತ್‌ನಲ್ಲಿ ಈ ಬಾರಿ ಉಪಾ ಧ್ಯಕ್ಷೆಯಾಗಿರುವ ಗೀತಾ ಸ್ವತಂತ್ರೆಯಾಗಿ ಸ್ಪರ್ಧಿಸುತ್ತಿದ್ದಾರೆ. ಇದು ಪಕ್ಷದಲ್ಲಿ ಇರಿಸುಮುರಿಸಿಗೆ ಕಾರಣವಾಗಿದೆ. ತನಗಾಗಿ ಅಲ್ಲ ಕಾರ್ಯಕರ್ತರಿಗಾಗಿ ತಾನು ಸ್ಪರ್ಧಿಸುತ್ತಿರುವುದೆಂದು ಗೀತಾ ತಿಳಿಸಿದ್ದಾರೆ.

ಕಳೆದಬಾರಿ ಅಂದಿನ ೬ನೇ ವಾರ್ಡ್‌ನಲ್ಲಿ ಸ್ಪರ್ಧಿಸಿ ಜಯಗಳಿಸಿದ ಗೀತಾ ಪಂಚಾಯತ್‌ನ ಉಪಾಧ್ಯಕ್ಷೆ ಯಾಗಿದ್ದರು. ವಾರ್ಡ್‌ನಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಇವರು ನಡೆಸಿದ್ದಾರೆಂದು ಕಾರ್ಯಕರ್ತರು ತಿಳಿಸಿದ್ದಾರೆ. ಈ ಬಾರಿಯೂ ಅದೇ ವಾರ್ಡ್‌ನಲ್ಲಿ ಸ್ಪರ್ಧಿಸಬೇಕೆಂದು ಗೀತಾ ಆಗ್ರಹಿಸಿದ್ದರು. ಈಮಧ್ಯೆ ನಾಯಕತ್ವ ಇನ್ನೊಬ್ಬ ಅಭ್ಯರ್ಥಿ ಯನ್ನು ಆ ವಾರ್ಡ್‌ನಿಂದ ಸ್ಪರ್ಧಿಸಲು ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ೫ನೇ ವಾರ್ಡ್ ಕಾಯರ್‌ಪದವಿನಿಂದ ಗೀತಾ ಸ್ಪರ್ಧಿಸಲು ಆ ವಾರ್ಡ್‌ನ  ಕಾರ್ಯಕರ್ತರು ಆಗ್ರಹಿಸಿರುವು ದಾಗಿಯೂ ಆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿರುವುದಾಗಿಯೂ ಗೀತಾ ತಿಳಿಸಿದ್ದಾರೆ. ಈ ಬಾರಿ  ಗೀತಾ ಗೆದ್ದರೆ, ಪಂಚಾಯತ್ ಅಧ್ಯಕ್ಷ ಸ್ಥಾನ ಮಹಿಳಾ ಮೀಸಲಾತಿ ಆದರೆ  ಗೀತಾರನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಬೇಕಾಗಿ ಬರಬಹುದೆಂಬ ನಿಟ್ಟಿನಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಕೆಲವರು  ಮಾಡಿದ ಕುತಂತ್ರವೇ ತನಗೆ  ಸೀಟು ತಪ್ಪಲು ಕಾರಣವೆಂದು ಅವರು ಹೇಳುತ್ತಿದ್ದಾರೆ. ಅಲ್ಲದೆ ಇಲ್ಲಿನ ನಾಯಕರು ತಮ್ಮ ಪತ್ನಿಯರನ್ನು ಸ್ಪರ್ಧಿಸುವಂತೆ ಮಾಡಲು ಸಿದ್ಧತೆಯಲ್ಲಿದ್ದರು. ಈಮಧ್ಯೆ ಪಂಚಾಯತ್ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲು ಆದಾಗ ನಾಯಕರು ತಮ್ಮ ಪತ್ನಿಯರನ್ನು ಸ್ಪರ್ಧಿಸುವುದರಿಂದ ಹಿಂಜರಿಸಿದರು. ಅಲ್ಲದೆ ಗೀತಾರನ್ನು ೮ನೇ ವಾರ್ಡ್ ನಿಂದ ಸ್ಪರ್ಧಿಸುವಂತೆ ತಿಳಿಸಿದರು.  ಆದರೆ  ಕಾರ್ಯಕರ್ತರು ೫ನೇ ವಾರ್ಡ್‌ನಿಂದಲೇ ಸ್ಪರ್ಧಿಸಬೇ ಕೆಂದು ಆಗ್ರಹಿಸಿದ್ದು, ಅವರು ತಿಳಿಸಿದರೆ ಸ್ಪರ್ಧೆಯಿಂದ ನಾನು ಹಿಂದೆ ಸರಿಯುವು ದಾಗಿ ಗೀತಾ ತಿಳಿಸಿದ್ದಾರೆ. ಕಳೆದಬಾರಿ ೧೩ ವಾರ್ಡ್‌ಗಳಿದ್ದ ಬೆಳ್ಳೂರು ಪಂಚಾಯತ್‌ನಲ್ಲಿ ೯ ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿದೆ. ಈ ಬಾರಿ ೧೪ ವಾರ್ಡ್ ಆಗಿ ಹೆಚ್ಚಳವಾಗಿದ್ದು, ೧೦ ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸ ಬಹುದೆಂದು ನಿರೀಕ್ಷಿಸಲಾಗಿದೆ.

ಈ ಮಧ್ಯೆ  ಗೀತಾರೊಂದಿಗೆ ಇಂದು ಚರ್ಚೆ ನಡೆಸಲಾಗುವುದೆಂದು ನಾಯಕರು ತಿಳಿಸಿದ್ದು, ಆದರೆ ನನಗೆ ಈ ಬಗ್ಗೆ ಯಾರೂ ಕೂಡಾ ಮಾಹಿತಿ ನೀಡಿಲ್ಲವೆಂದು ಗೀತಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಬೆಳ್ಳೂರಿನಲ್ಲಿ ಅಭ್ಯರ್ಥಿ ನಿರ್ಣಯ ವಿವಾದಕ್ಕೆಡೆಯಾಗಿದೆ.

You cannot copy contents of this page