ಪಾಲಕ್ಕಾಡ್: ಮಲಂಪುಳ ಶಾಲೆಯಲ್ಲಿ ಅಧ್ಯಾಪಕ ವಿದ್ಯಾರ್ಥಿಗೆ ಮದ್ಯ ನೀಡಿ ದೌರ್ಜನ್ಯಗೈದ ಘಟನೆಯಲ್ಲಿ 7 ವಿದ್ಯಾರ್ಥಿಗಳು ಹೇಳಿಕೆ ನೀಡಿರುವುದಾಗಿ ಚೈಲ್ಡ್ ವೆಲ್ಫೇರ್ ಸಮಿತಿ ಅಧ್ಯಕ್ಷ ಎಂ. ಸೇತುಮಾಧವನ್ ತಿಳಿಸಿದ್ದಾರೆ. ಮೊದಲ ಹಂತದ ಕೌನ್ಸಿಲಿಂಗ್‌ನಲ್ಲಿ 7 ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಲಾಗಿತ್ತು. ಇದರಲ್ಲಿ ೫ ಮಕ್ಕಳದ್ದು ಗಂಭೀರ ಆರೋಪವಾದ ಕಾರಣ ಇದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಅಧ್ಯಾಪಕನ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರೂ ಶಾಲಾ ಅಧಿಕಾರಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂಬುದು ಶಾಲಾ ಅಧಿಕಾರಿಗಳು ನಡೆಸಿದ ಲೋಪವೆಂದು ಅವರು ತಿಳಿಸಿದರು. ಶಾಲೆಯಲ್ಲಿ ಇದೇ ರೀತಿಯ ಘಟನೆ ಈ ಮೊದಲೂ ಉಂಟಾಗಿರುವುದಾಗಿಯೂ ಹೇಳಲಾಗುತ್ತಿದೆ.






