ಬನಕ್ಕೆ ಉಚಿತವಾಗಿ ಸ್ಥಳ ನೀಡಿ ಪ್ರಾಮಾಣಿಕತೆ ಮೆರೆದ ಕೊಡ್ಯಮ್ಮೆಯ ಜಲೀಲ್: ಅಭಿನಂದನೆ

ಕುಂಬಳೆ: ಕುಂಬಳೆ ಪಂಚಾಯತ್‌ನ ಕೊಡ್ಯಮ್ಮೆ ಜಮಾಅತ್  ಕಮಿಟಿ ಸದಸ್ಯನೂ, ಯು.ಎಚ್. ಕ್ಲಬ್‌ನ ಅಧ್ಯಕ್ಷನಾದ ಕೊಡ್ಯಮ್ಮೆಯ ಪಳ್ಳತ್ತಿಮಾರ್ ಮೂಸ ಅವರ ಪುತ್ರ ಜಲೀಲ್ ಕೊಡ್ಯಮ್ಮೆ ತನ್ನ ಹೆಸರಲ್ಲಿರುವ ೭ಸೆಂಟ್ಸ್ ಸ್ಥಳವನ್ನು ಹಿತ್ತಿಲಿಗೆ ಸೇರಿಕೊಂಡಿರುವ ಬನಕ್ಕಾಗಿ  ಉಚಿತವಾಗಿ ನೀಡಿದ್ದಾರೆ. ಜಲೀಲ್ ರ ಪ್ರಾಮಾಣಿಕತೆಯನ್ನು ಬನ ಸಮಿತಿ ಹಾಗೂ ನಾಗರಿಕರು ಅಭಿನಂದಿಸಿದ್ದಾರೆ. ಬನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಾಧಿಕಾರಿಗಳಾದ ದಾಸ್ ಹಾಗೂ ಕುಟುಂಬ  ಗೌರವಿಸಿದರೂ ಬನ ಸಮಿತಿ ಸದಸ್ಯರು ಜಲೀಲ್‌ರಿಗೆ ಪಾರಿತೋಷಕ ನೀಡಿದರು. ನಾಡಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ಜಲೀಲ್ ಸಕ್ರಿಯರಾಗಿದ್ದಾರೆ.

RELATED NEWS

You cannot copy contents of this page