ಸೇನೆಗೆ ಆಯ್ಕೆಯಾದ ಯುವಕನಿಗೆ ಅಭಿನಂದನೆ

ಬದಿಯಡ್ಕ: ಗ್ರಾಮೀಣ ಭಾಗದ ಯುವಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದು, ಇವರನ್ನು ಬದಿಯಡ್ಕ ಪಂಚಾಯತ್ ವತಿಯಿಂದ ಅಭಿನಂದಿಸ ಲಾಯಿತು.  ನೀರ್ಚಾಲು ಸಮೀಪದ ದೇವರಮೆಟ್ಟು ನಿವಾಸಿ ನಾರಾಯಣ- ಶಾರದಾ ದಂಪತಿ ಪುತ್ರ ಮಧುರಾಜ್ ದೇಶಸೇವೆಗೆ ಅವಕಾಶ ಲಭಿಸಿದ್ದು, ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿ ದೈಹಿಕ ಮತ್ತು ಲಿಖಿತ ಪರೀಕ್ಷೆಗಳಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಯಾಗಿದ್ದಾರೆ. ಇವರು ಇಂದು ಮಣಿಪುರ ದಲ್ಲಿ ನಡೆಯುವ ತರಬೇತಿಗಾಗಿ ತೆರಳಿದರು. ಕುಂಟಿಕಾನ ಹಿರಿಯ ಬುನಾದಿ ಶಾಲೆ, ಪೆರಡಾಲ ನವಜೀವನ ಶಾಲೆಯ ವಿದ್ಯಾರ್ಥಿಯಾಗಿದ್ದು, ಇವರನ್ನು ಬದಿಯಡ್ಕ ಪಂಚಾಯತ್  ಅಧ್ಯಕ್ಷ ಶಂಕರ ಡಿ. ಅಭಿನಂದಿಸಿದರು. ವಾರ್ಡ್ ಪ್ರತಿನಿಧಿ ಶ್ಯಾಮ್ ಪ್ರಸಾದ್ ಸರಳಿ ಶುಭ ಕೋರಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸಿಡಿಎಸ್ ಅಧ್ಯಕ್ಷೆ ಸುಲೋಚನ ಪುದುಕೋಳಿ, ಜಯಂತಿ ಕುಂಟಿಕಾನ, ಈಶ್ವರ ಪ್ರಸಾದ್ ಕುಳಮರ್ವ ಉಪಸ್ಥಿತರಿದ್ದರು.

You cannot copy contents of this page