ಹೆದ್ದಾರಿಯಲ್ಲಿ ಸಂಚರಿಸುವ  ವಾಹನಗಳ ನಿರೀಕ್ಷಿಸುವ ನಿಯಂತ್ರಣ ಕೊಠಡಿ ಸಜ್ಜು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಪ್ರಥಮ  ರೀಚ್ ತಲಪ್ಪಾಡಿಯಿಂದ ಚೆಂಗಳ ತನಕ ಪೂರ್ತಿಗೊಳ್ಳುವ ಹಂತದಲ್ಲಿದ್ದು,  ಈ ಮೂಲಕ ಸಾಗುವ ವಾಹನಗಳು ಜಾಗ್ರತೆ ವಹಿಸಬೇಕಾ ಗಿದೆ. ತಲಪ್ಪಾಡಿಯಿಂದ ಚೆಂಗಳದವ ರೆಗಿನ ಹೆದ್ದಾರಿಯಲ್ಲಿ ಸಂಪೂರ್ಣ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಇದರ ನಿಯಂತ್ರಣ ಕೊಠಡಿಗೆ ಮಂಜೇಶ್ವರ ದಲ್ಲಿ ಚಾಲನೆ ನೀಡಲಾಗಿದೆ. ಮಂಜೇಶ್ವರ ರೈಲು ನಿಲ್ದಾಣ ಸಮೀಪದ ಸರ್ವೀಸ್ ರಸ್ತೆ ಬಳಿಯಲ್ಲಿ ನಿಯಂತ್ರಣ ಕೊಠಡಿ ಸಿದ್ಧಗೊಂಡಿದೆ. ಅಲ್ಲದೆ ಇಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.  ಇಲ್ಲಿ ಸಿಸಿ ಕ್ಯಾಮರಾ ನಿಯಂತ್ರಣ ಕೊಠಡಿ, ವಿಶ್ರಾಂತಿ ಕೊಠಡಿ, ಪ್ರಥಮ ಚಿಕಿತ್ಸೆ, ಆಂಬುಲೆನ್ಸ್ ಮೊದಲಾದ ಸೌಕರ್ಯಗಳನ್ನು ಏರ್ಪಡಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಹೆದ್ದಾರಿ ಯಲ್ಲಿ ಸಂಚರಿಸುವ ವಾಹನಗಳು ಕಾನೂನು ಉಲ್ಲಂಘನೆ ನಡೆಸಿದರೆ ಕ್ರಮ ಶೀಘ್ರ ಉಂಟಾಗಲಿದೆ.

RELATED NEWS

You cannot copy contents of this page