ಸ್ಕೂಟರ್ ತಡೆದು ನಿಲ್ಲಿಸಿ ಸಿಪಿಎಂ ಕಾರ್ಯಕರ್ತರಿಗೆ ಆಕ್ರಮಣ : 10 ಮುಸ್ಲಿಂ ಲೀಗ್ ಕಾರ್ಯಕರ್ತರ ವಿರುದ್ಧ ಕೇಸು

ಕಾಸರಗೋಡು: ಪನೆಯಾಲ್,  ಪೆರಿಯಾಟಡ್ಕದಲ್ಲಿ ಸ್ಕೂಟರನ್ನು ತಡೆದು ನಿಲ್ಲಿಸಿ ಸಿಪಿಎಂ ಕಾರ್ಯಕರ್ತರಿಗೆ ಆಕ್ರಮಿಸಿರುವುದಾಗಿ ದೂರಲಾಗಿದೆ. ಪನೆಯಾಲ್  ತೋಕನಮೊಟ್ಟ ನಿವಾಸಿ ಎನ್.ಕೆ. ದಿಲೀಶ್ (24), ಲಿಜೇಶ್ ಎಂಬಿವರು ಗಾಯಗೊಂಡಿದ್ದಾರೆ. ಇದರಲ್ಲಿ ದಿಲೀಶ್‌ನನ್ನು ಕಾಞಂಗಾಡ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 10.30 ರ ವೇಳೆ ಘಟನೆ ನಡೆದಿದೆ. ಲಿಜೇಶ್‌ನ ಜೊತೆ ದಿಲೀಶ್ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಪೆರಿಯಾಟಡ್ಕಕ್ಕೆ ತಲುಪಿದ ವೇಳೆ ಮುಸ್ಲಿಂ ಲೀಗ್ ಕಾರ್ಯಕರ್ತರ ತಂಡವೊಂದು ತಡೆದು ನಿಲ್ಲಿಸಿ ದೊಣ್ಣೆ, ಪಂಚ್‌ನಿಂದ  ಆಕ್ರಮಿಸಿರುವುದಾಗಿ ಸಿಪಿಎಂ ಕಾರ್ಯಕರ್ತರು ದೂರಿದ್ದಾರೆ. ಪಂಚ್‌ನಿಂದ ಗುದ್ದಿದ ಹಿನ್ನೆಲೆಯಲ್ಲಿ ಎಡಕಣ್ಣು ಹಾಗೂ ಬಾಯಿಗೆ ಗಾಯಗೊಂಡಿರುವುದಾಗಿ ದಿಲೀಶ್ ದೂರಿದ್ದಾರೆ.

ಘಟನೆಯಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರಾದ ಅಶ್ರಫ್ ಅಲಿಯಾಸ್ ಅಚ್ಚಾಪು, ನಿಸಾರ್ ಮೊಹಮ್ಮದ್, ಸಾದಿಕ್ ಚೆರುಂಬ  ಹಾಗೂ ಕಂಡರೆ ಗುರುತು ಹಚ್ಚಬಹುದಾದ 7 ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.

You cannot copy contents of this page