ವೃದ್ಧರ ದಿನದಂದು ಸಿಪಿಎಂನ ಕೊಲೆ ಬೆದರಿಕೆ ಖಂಡನೀಯ- ಎಂ.ಎಲ್. ಅಶ್ವಿನಿ

ಕಾಸರಗೋಡು: ವೃದ್ಧರ ದಿನದಂದು ಹಿರಿಯ ನಾಗರಿಕರನ್ನು ಗೌರವಿಸುವುದಕ್ಕಾಗಿ ತಲುಪಿದ ಪುರುಷ ಸ್ವ-ಸಹಾಯ ಸಂಘದ ಕಾರ್ಯಕರ್ತರನ್ನು ತಡೆದು ಕೊಲೆ ಬೆದರಿಕೆಯೊಡ್ಡಿದ ಸಿಪಿಎಂ ಮುಖಂಡನ ಕ್ರಮ ಖಂಡನೀಯವೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಕಮ್ಯೂನಿಸ್ಟ್ ಶಕ್ತಿ ಕೇಂದ್ರಗಳಲ್ಲಿ ನೆಲೆಗೊಂಡಿರುವ ಪ್ರಜಾಪ್ರಭುತ್ವ ವಿರುದ್ಧ  ನೀತಿಯ ದೃಷ್ಟಾಂತವಾಗಿದೆ ಈ ರೀತಿಯ ಘಟನೆಗಳೆಂದು ಅವರು ನುಡಿದರು. ಕಳೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮಡಿಕೈ ಪಂಚಾಯತ್‌ನ ೧೩ನೇ ವಾರ್ಡ್‌ನಿಂದ ಸ್ಪರ್ಧಿಸಿದ ಪಿ. ಸುರೇಶನ್ ೨೬೩ ಮತಗಳನ್ನು ಗಳಿಸಿರುವುದರಲ್ಲಿರುವ ರಾಜಕೀಯ ದ್ವೇಷವೇ ಘಟನೆಯ ಹಿಂದಿರುವುದು ಎಂದು ಅಶ್ವಿನಿ ಆರೋಪಿಸಿದರು.

ತ್ರಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಎದುರಿಸಿದ ತಿರುಗೇಟುಗಳಿಂದ ಕೇರಳದ ಸಿಪಿಎಂ ನೇತೃತ್ವ ಪಾಠ ಕಲಿಯಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಭಿನ್ನತೆಗಳಿಗೆ, ರಾಜಕೀಯ ಸ್ಪರ್ಧೆಗಳಿಗೆ ಸ್ಥಳವಿದೆ. ಆದರೆ ಅದರ ಹೆಸರಲ್ಲಿ ಇತರ ರಾಜಕೀಯ ಪಕ್ಷಗಳ ಕಾರ್ಯಕರ್ತ ರನ್ನು ಬೆದರಿಸುವ ನಿಲುವು ಅಂಗೀಕ ರಿಸಲು ಸಾಧ್ಯವಿಲ್ಲವೆಂದು ಅಶ್ವಿನಿ ನುಡಿದರು. ಘಟನೆಯಲ್ಲಿ ಕೈವಾಡ ಹೊಂದಿರುವ ಸಿಪಿಎಂ ಮುಖಂಡರ ವಿರುದ್ಧ ತೀವ್ರ ಕಾನೂನು ಕ್ರಮ ಸ್ವೀಕರಿ ಸಲು ಪೊಲೀಸರು ಸಿದ್ಧರಾಗಬೇಕೆಂದು, ತಪ್ಪಿತಸ್ಥರ ವಿರುದ್ಧ ಕಾನೂನು ಅನುಸಾ ರವಾದಕ್ರಮ ಖಚಿತಪಡಿಸಬೇಕೆಂದು ಅಶ್ವಿನಿ ಆಗ್ರಹಿಸಿದರು.

You cannot copy contents of this page