ಪುತ್ತಿಗೆ: ಸುಂದರವಾದ ರಸ್ತೆ ಎಂಬ ನೆಲೆಯಲ್ಲಿ ವಾಹನಗಳು ಹೆಚ್ಚಿನ ವೇಗದಲ್ಲಿ ಸಂಚರಿಸುವಾಗ ಜಾಗ್ರತೆ ವಹಿಸಬೇಕಾದ ಸ್ಥಳವೊಂದು ಪೆರ್ಲ- ಸೀತಾಂಗೋಳಿ ರಸ್ತೆಯಲ್ಲಿದೆ. ಪುತ್ತಿಗೆ ಸಮೀಪದ ಮುಖಾರಿಕಂಡ ಬಸ್ ತಂಗುದಾಣದ ಸಮೀಪವೇ ಮೋರಿಯೊಂದಿಗೆ. ಇಲ್ಲಿಗೆ ತಲುಪುವಾಗ ವಾಹನಗಳೆಲ್ಲ ಅಪಘಾತಕ್ಕೀಡಾಗುತ್ತಿದ್ದು, ಕಾಂಕ್ರೀಟ್ನ ಉಬ್ಬು ತಗ್ಗುಗಳು ಇದಕ್ಕೆ ಕಾರಣವಾಗಿದೆ. ಮೋರಿಯ ಕಾಂಕ್ರೀಟ್ ಹಾಗೂ ರಸ್ತೆ ಮಧ್ಯೆ ಅಂತರವಿದ್ದು, ವೇಗದಿಂದ ಚಲಿಲುವ ವಾಹನಗಳು ಕಾಂಕ್ರೀಟ್ಗೆ ಗುದ್ದಿ ಕೆಲವೊಮ್ಮೆ ರಸ್ತೆ ಬಿಟ್ಟು ಬದಿಗೆ ಅಪ್ಪಳಿಸುವುದು ಕಂಡು ಬರುತ್ತಿದೆ. ಚಾಲಕರಿಗೆ ಗೋಚರವಾಗದ ಈ ಅಪಾಯಕರ ಗಂಟೆಯಿಂದ ಅಪಘಾತ ಸಂಭವಿಸಿ ದುರಂತಕ್ಕೂ ದಾರಿ ಯಾಗಲಿದೆ. ಇದನ್ನು ಸರಿಪಡಿಸಿ ವಾಹನ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.







