ಪಡಿಪ್ಪರೆ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರ ತೆರವು

ಬದಿಯಡ್ಕ: ಕುಂಬಳೆ ಮುಳ್ಳೇ ರಿಯ ಕೆಎಸ್‌ಟಿಪಿ ರಸ್ತೆಯ ಬದಿ ಯಡ್ಕ-ನೀರ್ಚಾಲು ಸಮೀಪದ ಪಡಿಪ್ಪರೆ ಎಂಬಲ್ಲಿ ರಸ್ತೆಗೆ ವಾಲಿ ಕೊಂಡಿರುವ ತೆಂಗಿನಮರವೊAದು ಅಪಾಯಕಾರಿಯಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿ ಸಲಾಯಿತು.
ಬದಿಯಡ್ಕ ಪಂ. ನೀರ್ಚಾಲು ವಾರ್ಡು ವ್ಯಾಪ್ತಿಯ ಕನ್ನೆಪ್ಪಾಡಿ ಪಡಿಪ್ಪರೆ ಎಂಬಲ್ಲಿ ರಸ್ತೆಯ ಬದಿ ತೆಂಗಿನ ಮರವೊಂದು ರಸ್ತೆಗೆ ವಾಲಿಕೊಂಡಿತ್ತು. ತಿರುವಿನ ಸ್ಥಳವಾಗಿರುವುದರಿಂದ ವಾಹನಗಳು ಸಂಚರಿಸುವ ವೇಳೆ ಈ ತೆಂಗಿನ ಮರ ವಾಹನಗಳಿಗೆ ತಾಗಿ ಕೊಳ್ಳುತ್ತಿತ್ತು. ಅದನ್ನು ತಪ್ಪಿಸುವುದಕ್ಕಾಗಿ ವಾಹನ ಚಾಲಕರು ಬಲಭಾಗದಲ್ಲಿ ಸಂಚರಿಸುತ್ತಿದ್ದರು. ಅದರಿಂದಾಗಿ ಎದುರಿನಿಂದ ಬರುವ ವಾಹನಕ್ಕೆ ತೊಂದರೆಯಾಗುತ್ತಿತ್ತು. ಪಂ. ಸದಸ್ಯ ಶ್ಯಾಮಪ್ರಸಾದ ಸರಳಿ ಹಾಗೂ ಅಧ್ಯಕ್ಷ ಶಂಕರ ಡಿ. ವಿದ್ಯುತ್ ಇಲಾಖೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಮರ ತೆರವು ಕಾರ್ಯ ಪೂರ್ತಿಗೊಳಿಸಿದರು.
ರಸ್ತೆಯ ಬದಿಯಲ್ಲೇ ಇರುವ ಈ ಮರವನ್ನು ತೆರವುಗೊಳಿಸಬೇಕೆಂದು ವಾಹನ ಚಾಲಕರು, ಸಾರ್ವಜನಿಕರು ಪಂ.ಗೆ ಮನವಿ ನೀಡಿದ್ದರು. ಸದಸ್ಯ ಶ್ಯಾಮಪ್ರಸಾದ ಸರಳಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದಕ್ಕೆ ಸ್ಥಳೀಯರು ಅಭಿನಂದಿಸಿದರು.

You cannot copy contents of this page