ಮುಂಡಿತ್ತಡ್ಕ: ಶೇಣಿ- ಮುಗು ಉಭಯ ಗ್ರಾಮಗಳ ಪ್ರಸಿದ್ಧ ಕ್ಷೇತ್ರವಾದ ಮುಗು ಶ್ರೀ ಸುಬ್ರಾಯದೇವ ದೇವಸ್ಥಾನದಲ್ಲಿ ಶಿಲಾಮಯ ಗರ್ಭಗುಡಿಯ ದಾರಂದ ಮುಹೂರ್ತ ಕಿರುಷಷ್ಠಿಯಾದ ನಿನ್ನೆ ಜರಗಿತು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಗರ್ಭಗುಡಿ ನಿರ್ಮಾಣ ನಡೆಯುತ್ತಿದೆ. ಈ ವರ್ಷದ ಕಿರು ಷಷ್ಠಿ ಮಹೋತ್ಸವದಂಗವಾಗಿ ದೇವರಿಗೆ ನವಕಾಭಿಷೇಕ, ಪರಿವಾರ ದೈವಗಳಿಗೆ ಹಾಗೂ ನಾಗ ತಂಬಿಲ ಸೇವೆ, ಬಲಿವಾಡು ಕೂಟ ಜರಗಿತು.







