ಸಿಪಿಐಯಿಂದ ದೆಹಲಿ ಚಲೋ::ಪೈವಳಿಕೆಯಲ್ಲಿ ಕಾಲ್ನಡೆ ಪ್ರಚಾರ ಜಾಥಾ

ಪೈವಳಿಕೆ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹಾಗೂ ದೇಶದ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಫೆಡರಲಿಸಂನ ಮೌಲ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಸೆಪ್ಟೆಂಬರ್ ೧ರಂದು ನಡೆಸಲಿರುವ ‘ದೆಹಲಿ ಚಲೋ’ ಕಾರ್ಯಕ್ರಮದ ಅಂಗವಾಗಿ ಕಾಲ್ನಡೆಗೆ ಪ್ರಚಾರ ಜಾಥಾ ನಡೆಯಿತು. ಸಿಪಿಐ ಪೈವಳಿಕೆ ಲೋಕಲ್ ಸಮಿತಿ ನೇತೃತ್ವದಲ್ಲಿ ನಿನ್ನೆ ಬಾಯಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ಶಾಸಕ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಉದ್ಘಾಟಿಸಿದರು. ಸಿಪಿಐ ಮಂಡಲ ಸಮಿತಿ ಸದಸ್ಯ ಚಣಿಯಾ ಕೊಮ್ಮಂಗಳ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಜಿಲ್ಲಾ ಸಮಿತಿ ಸದಸ್ಯರಾದ ಅಜಿತ್ ಎಂ.ಸಿ. ಲಾಲ್‌ಬಾಗ್, ರೇಖಾ ಚಿಪ್ಪಾರ್, ಮಂಡಲ ಸಮಿತಿ ಸದಸ್ಯ ಲಾರೆನ್ಸ್ ಡಿ.ಸೋಜ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಸಮಾರೋಪ ಸಮಾರಂಭ ಬಾಯಿಕಟ್ಟೆಯಲ್ಲಿ ನಡೆಯಿತು. ಸಿಪಿಐ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಅಜಿತ್ ಎಂ.ಸಿ. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸಿದರು. ಪಕ್ಷದ ಮುಖಂಡರಾದ ಕೇಶವ ಬಾಯಿಕಟ್ಟೆ ಹಾಗೂ ಈಶ್ವರ ನಾಯ್ಕ್ ಪೆರ್ಮುದೆ ಮಾತನಾಡಿದರು. ಪ್ರಚಾರ ಜಾಥಾಕ್ಕೆ ಜಾಥಾ ನಾಯಕ ಸುದಾನಂದ ಎ. ಹಾಗೂ ಜಾಥಾ ಮ್ಯಾನೇಜರ್ ವಲ್ಟಿ ಡಿ.ಸೋಜ ನೇತೃತ್ವ ನೀಡಿದರು.

RELATED NEWS

You cannot copy contents of this page