ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ಕ್ಷೇತ್ರದಲ್ಲಿ ವಿಶೇಷ ದೀಪೋತ್ಸವದೊಂದಿಗೆ ಧನುರ್ಮಾಸ ಪೂಜೆ ಸಮಾಪ್ತಿ

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ದಲ್ಲಿ ಧನುರ್ಮಾಸ ಪೂಜಾ ಮಹೋ ತ್ಸವ ನಿನ್ನೆ ವಿಶೇಷ ದೀಪೋತ್ಸವದೊಂ ದಿಗೆ ಸಮಾಪ್ತಿಗೊಂಡಿತು. ಶ್ರೀ ಕಾಳಿಕಾ ಪರಮೇಶ್ವರೀ ದೇವಿ, ಶ್ರೀ ಮಹಾಗಣ ಪತಿ, ಶ್ರೀ ವಿಶ್ವಕರ್ಮ ದೇವರಿಗೆ ಪೂಜೆ ನೆರವೇರಿತು. ಶ್ರೀ ದೇವರಿಗೆ ಪಂಚಾ ಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಿತು. ಬಳಿಕ ಕಾಸರಗೋಡು ಉಳಿಯತಡ್ಕ ಶ್ರೀ ಗುರುಕೃಪಾ ವೈದಿಕ ಶಿಕ್ಷಣ ಸಮಿತಿ ಭಜನಾ ಮಂಡಳಿಯಿAದ ಭಜನಾ ಸಂಕೀರ್ತನೆ ನಡೆಯಿತು. ಈ ವೇಳೆ ಮಾತೆಯರು, ಮಕ್ಕಳು ಸೇರಿ ಕ್ಷೇತ್ರ ವಠಾರದಲ್ಲಿ ಸಹಸ್ರಾರು ದೀಪಗಳನ್ನು ಬೆಳಗುವುದರೊಂದಿಗೆ ವಿಶೇಷ ದೀಪೋತ್ಸವ ನಡೆದು ದೇವರಿಗೆ ಧನುರ್ಮಾಸದ ಮಹಾಮಂಗಳಾರತಿ ನೆರವೇರಿತು. ಕ್ಷೇತ್ರದ ತಂತ್ರಿವರ್ಯರು, ಅರ್ಚಕ ವೃಂದ, ಆಡಳಿತ ಸಮಿತಿ, ಓಜ ಸಾಹಿತ್ಯ ಕೂಟ, ಮಹಿಳಾ ಸಂಘ, ಗುರು ಸೇವಾ ಪರಿಷತ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

You cannot copy contents of this page