ಶಸ್ತ್ರ ಚಿಕಿತ್ಸೆ ಮಧ್ಯೆ ಮೃತಪಟ್ಟ ಬಾಲಕನ ಮೃತದೇಹ: ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂಗೆ ;ಆಸ್ಪತ್ರೆಗೆ ಡಿವೈಎಫ್‌ಐ ಮಾರ್ಚ್

ಕಾಸರಗೋಡು: ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಮೃತಪಟ್ಟ ನಾಲ್ಕನೇ ತರಗತಿ ವಿದ್ಯಾರ್ಥಿಯ ಮೃತದೇಹವನ್ನು ತಜ್ಞ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾ ಯಿತು.  ಬೇಡಗಂ ತಲೇಕುನ್ನು ನಿವಾಸಿ ಅಶ್ರಫ್ ಸಖಾಫಿ ಎಂಬವರ ಪುತ್ರ  ಇಯಾಸ್ (9)ನ ಮೃತದೇಹವನ್ನು ಇಂದು ಬೆಳಿಗ್ಗೆ ಪರಿಯಾರಂಗೆ ಕೊಂಡೊಯ್ಯ ಲಾಗಿದೆ.  ಬಾಲಕನ ಸಾವಿಗೆ ಸಂಬಂಧಿಸಿ  ವ್ಯಾಪಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಪರಿಯಾರಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.  ಉದರಸಂಬಂಧ  ಅಸೌಖ್ಯ ಬಾಧಿಸಿದ್ದ ಇಯಾಸ್‌ನನ್ನು ನಿನ್ನೆ ಬೆಳಿಗೆ ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿತ್ತು. ಮಧ್ಯಾಹ್ನ ವೇಳೆ ನಿಧನ ಸಂಭವಿಸಿದೆ.  ಶಸ್ತ್ರಚಿಕಿತ್ಸೆ ವೇಳೆ ಉಂಟಾದ ಹೃದ ಯಾಘಾತವೇ ಸಾವಿಗೆ ಕಾರಣವಾಗಿ ದೆಯೆಂದು ಆಸ್ಪತ್ರೆ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ಮೃತನು ತಾಯಿ ಬುಶ್ರಾ, ಸಹೋದರರಾದ ಇಸ್ಮತ್, ಇಸ್ಲಾಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಇದೇ ವೇಳೆ ಬಾಲಕನ ಸಾವಿಗೆ ಕಾರಣವೇನೆಂಬ ಬಗ್ಗೆ  ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜನರಲ್ ಆಸ್ಪತ್ರೆಗೆ  ಡಿವೈಎಫ್‌ಐ ಕಾಸರಗೋಡು ಬ್ಲೋಕ್ ಕಮಿಟಿ ನೇತೃತ್ವದಲ್ಲಿ ಇಂದು ಮಾರ್ಚ್ ನಡೆಯಿತು. ಮಾರ್ಚ್ ಪರಿಗಣಿಸಿ ಆಸ್ಪತ್ರೆ  ಸಮೀಪ ಬಿಗಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.

RELATED NEWS

You cannot copy contents of this page