ಬದಿಯಡ್ಕ: ಅಸೌಖ್ಯ ಬಾಧಿಸಿ ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟರು.
ಬಾಂಜತ್ತಡ್ಕ ನಿವಾಸಿ ಸಂಜೀವ ಬಿ (57) ಎಂಬವರು ಮೃತಪಟ್ಟ ವ್ಯಕ್ತಿ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಇವರನ್ನು ಪರಿಯಾರಂನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ಹೃದಯಾಘಾತವುಂಟಾಗಿ ನಿಧನ ಸಂಭವಿಸಿದೆ. ದಿವಂಗತರಾದ ಐತ್ತ-ಚನಿಯಾರು ದಂಪತಿಯ ಪುತ್ರನಾದ ಮೃತರು ಪತ್ನಿ ಸರೋಜಿನಿ, ಮಕ್ಕಳಾದ ಓಂಪ್ರಕಾಶ್, ಋತಿಕೇಶ್, ಮಂಗಳಾ ದೇವಿ, ಭಾಗ್ಯಶ್ರೀ, ಸಹೋದರಿಯರಾದ ಸುಶೀಲ, ರಾಜೀವಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಕಮಲಾಕ್ಷ ಈ ಹಿಂದೆ ನಿಧನರಾಗಿದ್ದಾರೆ.






