ಟಿ.ವಿ ಕೆಟ್ಟುಹೋದ ವ್ಯಥೆ: ಗೃಹಿಣಿ ದೇಹಕ್ಕೆ ಕಿಚ್ಚಿಟ್ಟು ಆತ್ಮಹತ್ಯೆ

ಉಪ್ಪಳ: ಮನೆಯ ಟಿ.ವಿ ಕೆಟ್ಟುಹೋದ ಚಿಂತೆಯಲ್ಲಿದ್ದ  ಗೃಹಿಣಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.  ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ  ಕಾಶಿಮಠ ಗುಡ್ಡೆ ನಿವಾಸಿ ದಿ| ಯೋಗೀಶ್ ಪ್ರಭು ಎಂಬವರ ಪತ್ನಿ ಸಾವಿತ್ರಿ ಪ್ರಭು (65) ಸಾವಿಗೀಡಾದ ಮಹಿಳೆ.  ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಸಾವಿತ್ರಿ ಊಟಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಏಳು ಗಂಟೆಗೆ  ಮಗ ಗುರುಪ್ರಸಾದ್ ಪ್ರಭು ಎದ್ದು ಕೊಠಡಿಯಿಂದ ಹೊರಗೆ ಬಂದಾಗ ಅಡುಗೆ ಕೋಣೆಯಲ್ಲಿ  ತಾಯಿ ಸಾವಿತ್ರಿ ಬೆಂಕಿ ಹಚ್ಚಿಕೊಂಡು ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಅಡುಗೆ ಕೋಣೆಯ ಫೈಬರ್ ಕುರ್ಚಿಯಲ್ಲಿ ಕುಳಿತು ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ದೇಹಕ್ಕೆ ಸುರಿದು ಬೆಂಕಿ ಹಚ್ಚಿಕೊಂಡಿ ದ್ದಾರೆಂದು ಅಂದಾಜಿಸಲಾಗಿದೆ. ಕುರ್ಚಿ ಸುಟ್ಟು ದೇಹಕ್ಕೆ ಅಂಟಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.  ಪ್ರತಿದಿನ ಆರು ಗಂಟೆಗೆ ಸಾವಿತ್ರಿ ಏಳುತ್ತಿದ್ದರೆಂದು ಮಗ ಗುರುಪ್ರಸಾದ್ ತಿಳಿಸಿದ್ದಾರೆ. ಎದ್ದ ತಕ್ಷಣ ಟಿ.ವಿ  ವೀಕ್ಷಿಸುತ್ತಿದ್ದರು. ಆದರೆ ನಿನ್ನೆ ಟಿ.ವಿ ಕೆಟ್ಟು ಹೋಗಿರುವುದರಿಂದ ಅದನ್ನು ದುರಸ್ತಿಗಾಗಿ ಕೊಂಡೊಯ್ಯಲಾಗಿತ್ತು.  ರಿಪೇರಿ ಮಾಡಿ ಇಂದು ಮರಳಿ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ನಿನ್ನೆ ಮನೆಯಲ್ಲಿ ಟಿ.ವಿ ಇಲ್ಲದು ದರಿಂದ ತಾಯಿ ತೀವ್ರವಾಗಿ ಚಿಂತೆಯಲ್ಲಿ ದ್ದರೆಂದೂ ಇದೇ ಕಾರಣದಿಂದ ಆತ್ಮಹತ್ಯೆಮಾಡಿ ಕೊಂಡಿರಬಹು ದೆಂದು  ಪುತ್ರ ತಿಳಿಸಿದ್ದಾರೆ.  ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ಪುತ್ರ, ಪುತ್ರಿ ಸಂಗೀತ ಪೈ,  ಅಳಿಯ ಗುರುಪ್ರಸಾದ್ ಪೈ, ಸೊಸೆ ಪುಷ್ಪಾವತಿ, ಸಹೋದರಿಯ ರಾದ ಪ್ರಭಾ ನಾಯಕ್, ರೇವತಿ ಪೈ, ಉದಯಕುಮಾರಿ, ಜಯಶ್ರೀ ಕಿಣಿ, ಕೇಸರಿ ಪ್ರಭು ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page