ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಹಲವು ವರ್ಷಗಳಿಂದ ಶೋಚನೀಯÁವಸ್ಥೆಯಲ್ಲಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯನ್ನು ದುರಸ್ತಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಉಪ್ಪಳ ಪೇಟೆಯಿಂದ ರೈಲ್ವೇ ನಿಲ್ದಾಣ ತನಕದ ಸುಮಾರು ಒಂದು ಕಿಲೋ ಮೀಟರ್ ಕಾಂಕ್ರೀಟ್ ಹಾಗೂ ಡಾಮರು ರಸ್ತೆ ಹದಗೆಟ್ಟು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಚಾಯತ್ ಹಾಗೂ ರೈಲ್ವೇ ಇಲಾಖೆಗೆ ಸೇರಿದ ರಸ್ತೆಯಾಗಿದೆ ಇದು. ಇತ್ತೀಚೆಗೆ ರಸ್ತೆ ಉದ್ದಕ್ಕೂ ಚರಂಡಿಯನ್ನು ಅಭಿವೃದ್ದಿಗೊಳಿಸ ಲಾಗಿದೆ. ಈ ಪ್ರದೇಶದಲ್ಲಿ ಅಯ್ಯಪ್ಪ ಮಂದಿರ, ನೂರಾರು ಮನೆಗಳು, ವ್ಯಾಪಾರ ಸಂಸ್ಥೆಗಳು ಇದ್ದು, ದಿನನಿತ್ಯ ಸಾವಿರಾರು ಮಂದಿ ಸಂಚಾರ ನಡೆಸುತ್ತಿದ್ದಾರೆ. ಶೋಚನೀಯ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಸುಗಮಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.







