ಮೊಗ್ರಾಲ್: ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಂಗವಾಗಿ ಇಂದು ಮೊಗ್ರಾಲ್ ಸರಕಾರಿ ವಿಎಚ್‌ಎಸ್‌ಎಸ್‌ನಲ್ಲಿ ಮಾತೃಸಂಗಮ ನಡೆಯಿತು. ಶಾಲೆಯ ಮಕ್ಕಳ ತಾಯಂದಿರು ಭಾಗವಹಿಸಿದ ಮಾತೃಸಂಗಮ ಇಂದು ಬೆಳಿಗ್ಗೆ ಶಾಲಾ ಸಭಾಂಗಣದಲ್ಲಿ ಜರಗಿತು.
ಕಲೋತ್ಸವ ನಗರದಲ್ಲಿ ಗ್ರೀನ್ ಪ್ರೊಟೋಕಾಲ್ ಸಮಿತಿ ಆಶ್ರಯದಲ್ಲಿ ಈ ತಿಂಗಳ 26ರಂದು ಬೆಳಿಗ್ಗೆ 10 ಗಂಟೆಗೆ ಮಡಲು ಹೆಣೆಯುವ ಸ್ಪರ್ಧೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.







