ಉಪ್ಪಳದಲ್ಲಿ ವೈದ್ಯರಿಗೆ ಹಲ್ಲೆ: ಮೂರು ಮಂದಿ ವಿರುದ್ಧ ಕೇಸು

ಉಪ್ಪಳ: ಉಪ್ಪಳದ ಖಾಸಗಿ ಆಸ್ಪತ್ರೆಯೊಂದರ ಆವರಣದೊಳಗೆ ನುಗ್ಗಿದ ತಂಡ ವೈದ್ಯರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಉಪ್ಪಳ ರೈಲು ನಿಲ್ದಾಣ ರಸ್ತೆಯಲ್ಲಿರುವ ದೇವಿ ಪ್ರಸಾದ್ ಮಾವೆ ಆಸ್ಪತ್ರೆಯ ವೈದ್ಯ ಕುಮಾರ್ ಶಾಶ್ವತ್ (42) ಅವರಿಗೆ   ತಂಡ ಹಲ್ಲೆಗೈದಿದೆ. ಬಿಹಾರ್ ನಿವಾಸಿಯಾದ ಡಾ| ಕುಮಾರ್ ಶಾಶ್ವತ್ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹಲ್ಲೆಗೆ ಸಂಬಂಧಿಸಿ ವೈದ್ಯ ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಬುಧವಾರ ರಾತ್ರಿ ೮.೩೦ರ ವೇಳೆ ಘಟನೆ ನಡೆದಿದೆ. ಆಸ್ಪತ್ರೆ ಆವರಣದೊಳಗೆ ಮೂರು ಮಂದಿಯ ತಂಡ ವೈದ್ಯರನ್ನು ತಡೆದು ನಿಲ್ಲಿಸಿ ಹಲ್ಲೆಗೈದು ಗಾಯಗೊಳಿಸಿರುವುದಾಗಿ ಮಂಜೇಶ್ವರ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಹಲ್ಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ.

You cannot copy contents of this page