ವಿವಾಹಕ್ಕೆ ಮುಂಚೆ ಯಾರನ್ನೂ ನಂಬಬಾರದು; ದೈಹಿಕ ಸಂಬಂಧಗಳಲ್ಲಿ ಏರ್ಪಡುವಾಗ ಜಾಗ್ರತೆ ಪಾಲಿಸಲು ಸುಪ್ರೀಂ ಕೋರ್ಟ್ ಮುನ್ನೆಚ್ಚರಿಕೆ

ದೆಹಲಿ: ವಿವಾಹಕ್ಕೆ ಮುಂಚಿತ ಗಂಡು ಮಕ್ಕಳು, ಹೆಣ್ಮಕ್ಕಳು ಸಂಪೂರ್ಣ ಅಪರಿಚಿತರಾಗಿದ್ದಾರೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ವಿವಾಹದ ಮುಂಚಿತ ಇರುವ ದೈಹಿಕ ಸಂಬಂಧಗಳಲ್ಲಿ ಏರ್ಪಡುವವರು ಅತ್ಯಂತ ಜಾಗ್ರತೆ ಪಾಲಿಸಬೇಕೆಂದು ಸುಪ್ರೀಂಕೋರ್ಟ್ ಮುನ್ನೆಚ್ಚರಿಕೆ ನೀಡಿದೆ. ವಿವಾಹ ಭರವಸೆ ನೀಡಿ ದೌರ್ಜನ್ಯಗೈದ ರೆಂಬ ಪ್ರಕರಣದಲ್ಲಿ ಆರೋಪಿಯ ಜಾಮೀನು ಅರ್ಜಿ ಪರಿಗಣಿಸುತ್ತಿದ್ದ ಮಧ್ಯೆ ನ್ಯಾಯಾಲಯ ಈ ಪರಾಮರ್ಶೆ ನಡೆಸಿದೆ. ನ್ಯಾಯಾಧೀಶರಾದ ಬಿ.ವಿ. ನಾಗರತ್ನ, ಉಜ್ಜಲ್ ಭೂಯಾನ್ ಎಂಬಿವರು ಸೇರಿದ ವಿಭಾಗೀಯ ಪೀಠ ಕೇಸು ಪರಿಗಣಿಸಿತ್ತು.

ದುಬಾಯಿಯಲ್ಲಿ ಆರೋಪಿ ತನ್ನೊಂದಿಗೆ ದೈಹಿಕ ಸಂಬಂಧದಲ್ಲಿ ಏರ್ಪಟ್ಟಿರುವುದಾಗಿ ದೂರುದಾರೆಯ ಆರೋಪವನ್ನು ನ್ಯಾಯಾಲಯ ಪ್ರಶ್ನಿಸಿತು. ಇದು ಪರಸ್ಪರ ಒಪ್ಪಂದದ ಮೂಲಕವಿರುವ ಸಂಬಂಧವಾಗಿದೆ. ನಾವು ಹಳೆಯ ಚಿಂತನೆಯವರಾಗಿರ ಬಹುದು. ಆದರೆ ವಿವಾಹಕ್ಕೆ ಮುಂಚಿತ ಓರ್ವ ಗಂಡು ಹಾಗೂ ಹೆಣ್ಣು ಸಂಪೂರ್ಣ ಅಪರಿಚಿತರಾಗಿದ್ದಾರೆ. ವಿವಾಹದ ಮುಂಚಿತ ದೈಹಿಕ ಸಂಬಂಧಗಳಲ್ಲಿ ಏರ್ಪಡುವಾಗ ಜಾಗ್ರತೆ ಪಾಲಿಸಬೇಕಾ ಗಿದೆ. ಇವರ ಸಂಬಂಧ ಎಷ್ಟು ಆಳದಲ್ಲಿ ದ್ದರೂ ವಿವಾಹಕ್ಕೆ ಮುಂಚಿತ ಅವರಿಗೆ ದೈಹಿಕ ಸಂಪರ್ಕದಲ್ಲಿ ಏರ್ಪಡಲು ಹೇಗೆ ಸಾಧ್ಯವಾಗುತ್ತದೆ ಎಂದು ತಿಳಿಯುತ್ತಿಲ್ಲ. ವಿವಾಹಕ್ಕೆ ಮುಂಚಿತ ಯಾರೂ ಯಾರನ್ನೂ ನಂಬಬಾರದು- ಜಸ್ಟೀಸ್ ನಾಗರತ್ನ ನುಡಿದರು.

೨೦೨೨ರಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್‌ನ ಮೂಲಕ ದೂರುದಾರೆ ಹಾಗೂ ಆರೋಪಿ ಪರಿಚಯಗೊಂಡಿ ದ್ದರು. ಬಳಿಕ ವಿವಾಹ ಭರವಸೆ ನೀಡಿ ದೆಹಲಿಯಲ್ಲೂ, ದುಬಾಯಿಯಲ್ಲೂ ಆರೋಪಿಯೊಂದಿಗೆ ಹಲವು ಬಾರಿ ದೈಹಿಕ ಸಂಬಂಧದಲ್ಲಿ ಏರ್ಪಟ್ಟಿದ್ದಾರೆ. 2024 ಜನವರಿಯಲ್ಲಿ ಪಂಜಾಬ್‌ನಲ್ಲಿ ಈತ ಇನ್ನೋರ್ವೆ ಯುವತಿಯನ್ನು ವಿವಾಹವಾಗಿರುವುದಾಗಿ ಬಳಿಕ ತಿಳಿದು ಬಂದಿರುವುದಾಗಿಯೂ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಇದೊಂದು ಪರಸ್ಪರ ಒಪ್ಪಿಗೆ ಪ್ರಕಾರವಿ ರುವ ಸಂಬಂಧವಾಗಿದೆ ಎಂದು ವಿಭಾ ಗೀಯ ಪೀಠ ನಿರೀಕ್ಷಿಸಿದೆ. ಆದುದರಿಂದ ಈ ರೀತಿಯ ಪ್ರಕರಣಗಳಲ್ಲಿ ವಿಚಾರಣೆ ಮಾಡಬೇಕಾಗಿಲ್ಲವೆಂದು ನ್ಯಾಯಾಧೀಶೆ ನಾಗರತ್ನ ತಿಳಿಸಿದ್ದಾರೆ.

RELATED NEWS

You cannot copy contents of this page