ಕುಂಬಳೆಯಲ್ಲಿ ಮಾದಕವಸ್ತು ಮಾರಾಟ ತೀವ್ರ: 0.75 ಗ್ರಾಂ ಎಂಡಿಎಂಎ ಸಹಿತ ಇಬ್ಬರ ಬಂಧನ

ಕುಂಬಳೆ: ಮಾದಕ ವಸ್ತುಗಳ ವಿರುದ್ಧ ಪೊಲೀಸರು ಆರಂಭಿಸಿರುವ ಆಪರೇಶನ್ ತೂಫಾನ್ ಕಾರ್ಯಾ ಚರಣೆ ತೀವ್ರಗೊಳಿಸಿದ್ದು, ಇದರಂತೆ ಮತ್ತಿಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಬ್ರಾಣ ಕಲ್ಲೆಟ್ಟಿ ಹೌಸ್‌ನ ಹಂಸ (40), ಕುಂಟಂಗೇರಡ್ಕ ವೆಲ್ಫೇರ್ ಶಾಲೆ ಬಳಿಯ ನಿವಾಸಿ ಅಬ್ದುಲ್ ನಿಸಾರ್ (32) ಎಂಬಿವರನ್ನು ಕುಂಬಳೆ ಎಸ್‌ಐ ಗಣೇಶನ್ ನೇತೃತ್ವದಲ್ಲಿ ಬಂಧಿಸಲಾಗಿದೆ.

ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೊದಲು ಹಂಸನ ಕೈಯಿಂದ 0.61 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.  ಬಳಿಕ ಈತನನ್ನು ತನಿಖೆಗೊಳಪಡಿಸಿ ದಾಗ ಈತನಿಗೆ ಎಂಡಿಎಂಎ ನೀಡಿರು ವುದು ಅಬ್ದುಲ್ ನಿಸಾರ್ ಆಗಿದ್ದಾನೆಂದು ತಿಳಿದು ಬಂದಿದೆ. ಕೂಡಲೇ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ನಿಸಾರ್‌ನನ್ನು ತಪಾಸಣೆ ನಡೆಸಿದಾಗ ಆತನ ಕೈಯಿಂದಲೂ 0.9 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಎಂಡಿಎಂಎ ಸಹಿತ ಮಾದಕವಸ್ತು ದಂಧೆಯ ಪತ್ತೆಗಾಗಿ ಕಾರ್ಯಾಚರಣೆ ಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page