ಕಾಸರಗೋಡು: ಮಂಜೇಶ್ವರ, ಕಾಸರಗೋಡು ವಿಧಾನಸಭಾ ಮಂಡಲಗಳಲ್ಲಿ ಐಕ್ಯರಂಗದ ಅಭ್ಯರ್ಥಿಗಳು ಸುಲಭದಲ್ಲಿ ಜಯಗಳಿಸುವರೆಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ನುಡಿದರು. ಪ್ರೆಸ್‌ಕ್ಲಬ್‌ನ ಮೀಟ್ ದ ಪ್ರೆಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಎರಡು ಮಂಡಲಗಳಲ್ಲಿ ಐಕ್ಯರಂಗಕ್ಕೆ ಯಾವುದೇ ಆತಂಕವಿಲ್ಲ. ರಾಜ್ಯದಲ್ಲಿ ಐಕ್ಯರಂಗ 100ಕ್ಕೂ ಹೆಚ್ಚು ಸೀಟು ಗಳಿಸಿ ಅಧಿಕಾರಕ್ಕೇರಲಿದೆ. ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ- ಬಿಜೆಪಿ ಮಧ್ಯೆ ಡೀಲ್ ಇದೆ. 2021ರ ಚುನಾವಣೆಯಲ್ಲಿ 60 ಮಂಡಲಗಳಲ್ಲಿ ಈ ರೀತಿಯ ಡೀಲ್ ನಡೆಸಲಾಗಿತ್ತು ಎಂದು ಚೆನ್ನಿತ್ತಲ ಆರೋಪಿಸಿದರು. ಕಲ್ಲಟ್ರ ಮಾಹಿನ್ ಹಾಜಿ, ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಜೊತೆಗಿದ್ದರು.






