ಹುಂಜಕೋಳಿ ಕುಕ್ಕಿ ವೃದ್ದೆಗೆ ಗಾಯ:ಮುಖಕ್ಕೆ 12 ಹೊಲಿಗೆ ಹಾಕಿ ಚಿಕಿತ್ಸೆ

ಕೊಲ್ಲಂ: ಹುಂಜಕೋಳಿ ಕುಕ್ಕಿ ವೃದ್ದೆ ಗಂಭೀರವಾಗಿ ಗಾಯಗೊಂಡಿ ದ್ದಾರೆ. ಕುಯಪ್ಪಳ್ಳಿ ಮರುದಮನ್ ಪಳ್ಳಿ ಸುಜಿತ್ ಭವನ ನಿವಾಸಿ ಜೋಯ್ಸ್ (74) ಹುಂಜ ಕೋಳಿ ಕುಕ್ಕಿ ಗಾಯಗೊಂಡಿರುವ ವೃದ್ದೆ. ನಿನ್ನೆ ಅಂಗಡಿಗೆ ಹೋಗಿ ಮನೆಗೆ ಮರಳುತ್ತಿ ರುವ ಮಧ್ಯೆ ಇವರದೇ ಕೋಳಿ ಕುಕ್ಕಿದೆ. ಹಾರಿ ಬಂದು ತಲೆಯಮೇಲೆ ಕುಳಿತ ಕೋಳಿ ಮೂಗಿನ ಬದಿ, ಹುಬ್ಬಿಗೆ ಕುಕ್ಕಿ ಗಾಯಗೊಳಿಸಿದೆ. ಜೋಯ್ಸ್‌ರ ಬೊಬ್ಬೆ ಕೇಳಿ ನೆರೆಮನೆಯ ಮಹಿಳೆಯೋರ್ವೆ ತಲುಪಿ ಕೋಳಿಯನ್ನು ಓಡಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಕ್ಕೆ 12 ಹೊಲಿಗೆ ಹಾಕಿರುವುದಾಗಿ ಡಾಕ್ಟರ್ ತಿಳಿಸಿದ್ದಾರೆ. ಕೋಳಿಯ ಆಕ್ರಮಣದಿಂದ ಕಣ್ಣಿಗೂ ಗಾಯವುಂಟಾಗಿದೆ. ಇದು ಎರಡನೇ ಬಾರಿ ಜೋಯ್ಸ್‌ಗೆ ಕೋಳಿ ಆಕ್ರಮಣ ನಡೆಸಿರುವುದೆಂದು ಸಂಬಂಧಿಕರು ತಿಳಿಸಿದ್ದಾರೆ.

ಈ ಮೊದಲು ನಡೆದು ಹೋಗುವಾಗ ಬೆನ್ನಟ್ಟಿ ಆಕ್ರಮಿಸಲು ಯತ್ನಿಸಿದೆಯಾದರೂ ಇವರು ಓಡಿ ಹೋದ ಕಾರಣ ಪಾರಾಗಿದ್ದಾರೆ.

RELATED NEWS

You cannot copy contents of this page