ತೃಶೂರು: ಏಳರ ಹರೆಯದ ಬಾಲಕ ಚಿರತೆಯ ದಾಳಿಗೆ ಬಲಿಯಾದ ದಾರುಣ ಘಟನೆ ತೃಶೂರು ಬಳಿಯ ವಾಲ್ಪಾರ ಎಂಬಲ್ಲಿ ನಡೆದಿದೆ.
ಅಸ್ಸಾಂ ನಿವಾಸಿ ದಂಪತಿಯ ಪುತ್ರ ಮೂರ್ ಬುಜಿ ಎಂಬಾತ ಸಾವಿಗೀಡಾದ ಬಾಲಕನಾಗಿದ್ದಾನೆ. ನಿನ್ನೆ ರಾತ್ರಿ 7.30ರ ವೇಳೆ ಘಟನ ನಡೆದಿದೆ. ಹಾಲು ತರಲು ಅಂಗಡಿಗೆ ಹೋದ ಬಾಲಕ ಮರಳಿ ಬಾರದ ಹಿನ್ನೆಲೆಯಲ್ಲಿ ಹುಡುಕಾಡುತ್ತಿದ್ದಾಗ ಚಹಾ ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ದೇಹದಲ್ಲಿ ಚಿರತೆ ದಾಳಿಯ ಗಾಯಗಳು ಕಂಡುಬಂದಿವೆ. ಇದೇ ಪ್ರದೇಶದಲ್ಲಿ ಒಂದು ತಿಂಗಳ ಹಿಂದೆಯೂ ಚಿರತೆ ನಾಲ್ಕರ ಹರೆಯದ ಬಾಲಕಿಯನ್ನು ಕೊಂದು ತಿಂದ ಘಟನೆಯೂ ನಡೆದಿತ್ತು.