ಪೈವಳಿಕೆ: ಮರಿಕೆ ನಿವಾಸಿ ಈಶ್ವರ ನಾಯ್ಕ್ (68) ನಿಧನ ಹೊಂದಿದರು. ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್‌ನಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸಿದ್ದರು. ಇವರ ತಂದೆ ರಾಮ ನಾಯ್ಕ್, ತಾಯಿ ವೆಂಕಮ್ಮ, ಸಹೋದರ ಕೃಷ್ಣ ನಾಯ್ಕ್ ಈ ಹಿಂದೆ ನಿಧನ ಹೊಂದಿದ್ದಾರೆ. ಅವಿವಾಹಿತರಾಗಿದ್ದರು. ನಿಧನಕ್ಕೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಹಾರಿಸ್ ಪೈವಳಿಕೆ, ಶ್ರೀನಿವಾಸ ಭಂಡಾರಿ, ನಾರಾಯಣ ಶೆಟ್ಟಿ ಅಂಬಿಕಾನ, ಎಕೆಎಸ್ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಚಂದ್ರ ನಾಕ್ ಮಾನಿಪ್ಪಾಡಿ ಮನೆಗೆ ತೆರಳಿ ಸಂತಾಪ ಸೂಚಿಸಿದರು. ಪೈವಳಿಕೆ ವಿಲ್ಲೇಜ್ ಸಮಿತಿ, ಸಿಪಿಎಂ ಲೋಕಲ್ ಸಮಿತಿ, ಬಾಯಿಕಟ್ಟೆ ಬ್ರಾಂಚ್ ಸಹಿತ ವಿವಿಧ ಬ್ರಾಂಚ್‌ಗಳು, ಸಿಐಟಿಯು, ಡಿವೈಎಫ್‌ಐ, ಎಸ್‌ಎಫ್‌ಐ ಮೊದಲಾದ ಸಂಘಟನೆಗಳ ಘಟಕಗಳು ಸಂತಾಪ ಸೂಚಿಸಿವೆ.






