ಶ್ರೀನಗರ: ದೆಹಲಿಯಲ್ಲಿ ಕಾರು ಬಾಂಬ್ ಸ್ಪೋಟ ನಡೆದು 13 ಮಂ ದಿಯ ಪ್ರಾಣ ಬಲಿತೆಗೆದು ಹಲವರು ಗಾಯಗೊಂಡ ಕರಾಳತೆಯ ಭೀತಿ ಇನ್ನೂ ಮಾಸದಿರುವ ವೇಳೆಯಲ್ಲೇ ಶ್ರೀನಗರದಲ್ಲಿ ಪೊಲೀಸ್ ಠಾಣೆಯಲ್ಲಿ ನಿನ್ನೆ ತಡರಾತ್ರಿ ಇನ್ನೊಂದು ಅತೀ ಭೀಕರ ಸ್ಫೋಟ ನಡೆದಿದೆ.
ಇದರಲ್ಲಿ 9 ಮಂದಿ ಸಾವನ್ನಪ್ಪಿ ೨೯ ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಇದ ರಿಂದಾಗಿ ಸಾವುನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಸ್ಫೋಟಕವಸ್ತುಗಳನ್ನು ಪರಿಶೀಲಿಸುತ್ತಿದ್ದ ಪೊಲೀ ಸರು ಮತ್ತು ವಿಧಿವಿಜ್ಞಾನ ತಂಡದ ಅಧಿಕಾರಿಗಳಿದ್ದಾರೆ. ಮಾತ್ರವಲ್ಲ ಇದರಲ್ಲಿ ಓರ್ವ ಉಪತಹಶೀಲ್ದಾರ್ ಮತ್ತು ಗ್ರಾಮ ಮುಖ್ಯಸ್ಥರೂ ಒಳಗೊಂ ಡಿದ್ದಾರೆ. ಉಳಿದವರನ್ನು ಗುರುತುಹ ಚ್ಚುವ ಕಾರ್ಯ ಈಗ ನಡೆಯುತ್ತಿದೆ.
ದೆಹಲಿ ಕಾರು ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಭಯೋತ್ಪಾದಕ ವೈದ್ಯ ಮುಜಾಮ್ಮಿಲ್ ಗನೈರ್‌ನ ಫರಿದಾಬಾದ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ಗುಪ್ತವಾಗಿ ದಾಸ್ತಾನು ಇರಿಸಲಾಗಿದ್ದ 360 ಕೆಜಿ ಸ್ಫೋಟಕ ವಸ್ತುಗಳ ಪೈಕಿ ಅದರ ಒಂದು ಭಾಗವನ್ನು ವಿಧಿ ವಿಜ್ಞಾನ ಪರೀಕ್ಷೆಗಾಗಿ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ತಂದಿರಿಸಲಾಗಿತ್ತು. ಪೊಲೀಸರು, ವಿಧಿ ವಿಜ್ಞಾನ ತಂಡದವರು ಮತ್ತು ಉಪ ತಹಶೀಲ್ದಾರರು ನಿನ್ನೆ ರಾತ್ರಿ ಅದನ್ನು ಪರಿಶೀಲಿಸುತ್ತಿರುವ ವೇಳೆಯಲ್ಲಿ ಅದು ಸ್ಫೋಟಗೊಂಡಿದೆ. ಸ್ಫೋಟದ ಆಘಾತಕ್ಕೆ ಇಡೀ ಪೊಲೀಸ್ ಠಾಣೆಗೆ ಬೆಂಕಿತಗಲಿ ಪೂರ್ಣವಾಗಿ ಹಾನಿಗೊಂಡಿದೆ. ಮಾತ್ರ ವಲ್ಲ ಪರಿಸರದ ಹಲವು ಮನೆಗಳಿಗೂ ಹಾನಿಯುಂ ಟಾಗಿದೆಯಲ್ಲದೆ ಪೊಲೀಸ್ ವಾಹನ ಗಳೂ ಬೆಂಕಿಗಾಹುತಿಯಾಗಿದೆ ಯೆಂದು ಜಮ್ಮು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ನಡೆದ ಸ್ಫೋಟದ ಹೊಣೆಗಾ ರಿಕೆಯನ್ನು ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉಪ ಸಂಘಟನೆಯೊಂದು ವಹಿಸಿಕೊಂಡಿದೆ. ಆದ್ದರಿಂದ ಪೊಲೀಸ್ ಠಾಣೆಯಲ್ಲಿ ನಡೆದ ಬಾಂಬ್ ಸ್ಫೋಟ ಒಂದು ಬುಡಮೇಲು ಕೃತ್ಯವಾಗಿದೆಯೇ ಮತ್ತು ಅದರ ಪೂರ್ಣ ರೀತಿಯ ತನಿಖೆಯನ್ನು ಆರಂಭಿಸವಾಗಿ ದೆಯೆಂದು ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.







