ಮುಂದಿನ 10 ದಿನ ರಾಜ್ಯದಲ್ಲಿ ಅತೀ ತೀವ್ರ ಉಷ್ಣತೆ

ತಿರುವನಂತಪುರ: ರಾಜ್ಯದಲ್ಲಿ ಮುಂದಿನ ಹತ್ತು ದಿನ ಅತೀ ತೀವ್ರ ಉಷ್ಣತೆ ಅನುಭವಕ್ಕೆ ಬರಲಿದೆ ಯೆಂದು ಹವಾಮಾನ ಇಲಾಖೆ ತಿಳಿಸಿದೆ.  ಈ ದಿನಗಳಲ್ಲಿ ತೀವ್ರ  ಮಳೆ ಸುರಿ ಯುವ ಸಾಧ್ಯತೆ ಇಲ್ಲ.  ಇದರಿಂದ ಉಷ್ಣತೆ ಎಂದಿಗಿಂ ತಲೂ ಹೆಚ್ಚಾಗಿರಲಿದೆ.ಆದರೆ ಉಷ್ಣ ಅಲೆಯ ಸಾಧ್ಯತೆ ಇಲ್ಲವೆಂದು ತಿಳಿಸಲಾಗಿದೆ. ನಿನ್ನೆ ಅತೀ ತೀವ್ರ ಉಷ್ಣತೆ ಪಾಲಕ್ಕಾಡ್ (39.2)ನಲ್ಲಿ ದಾಖಲಾಗಿದೆ. ನಾಳೆವರೆಗೆ ಕಾಸರ ಗೋಡು, ಕಲ್ಲಿಕೋಟೆ, ಪಾಲ ಕ್ಕಾಡ್, ಕೊಲ್ಲಂ ಜಿಲ್ಲೆಗಳಲ್ಲಿ ಉಷ್ಣತೆ ಮಟ್ಟ ೩೮ ಡಿಗ್ರಿ ವರೆಗೆ  ಏರಲಿದೆ. ಉಳಿದಂತೆ ಕಣ್ಣೂರು, ತೃಶೂರು, ಎರ್ನಾಕುಳಂ, ಕೋಟ್ಟಯಂ, ಆಲಪ್ಪುಳ ಜಿಲ್ಲೆಗಳಲ್ಲಿ 37 ಡಿಗ್ರಿವರೆಗೆ, ಪತ್ತನಂತಿಟ್ಟದಲ್ಲಿ 36 ಡಿಗ್ರಿವರೆಗೆ ಉಷ್ಣತೆ ಏರಲು ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

RELATED NEWS

You cannot copy contents of this page