ಮುಖ್ಯಮಂತ್ರಿ ವಿರುದ್ಧ ಫೇಸ್‌ಬುಕ್ ಪೋಸ್ಟ್: ಕೇಸು ದಾಖಲು

ಕಾಸರಗೋಡು: ಫೇಸ್ ಬುಕ್‌ನಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಪೋಸ್ಟ್ ಮಾಡಿದುದಕ್ಕೆ ಸಂಬಂಧಿಸಿ ಓರ್ವನ ವಿರುದ್ಧ ಕಾಸರಗೋಡು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರಪ್ಪ ಪಟ್ಲಂ ಕಮ್ಮಾಡಿ ನಿವಾಸಿ ಸಿ.ಎಚ್. ಸುಬೈರ್ ಎಂಬವರು ಈ ಬಗ್ಗೆ  ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿ ಪರಪ್ಪಕಮ್ಮಾಡತ್ ನಿವಾಸಿ ರಜಾಕ್ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಯ ಫೇಸ್ ಬುಕ್ ಮೂಲಕ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಅನುಚಿತ   ವಿಷಯಗಳನ್ನು ಪೋಸ್ಟ್  ಮಾಡಿದ್ದಾನೆಂದೂ ಅದಕ್ಕೆ ಸಂಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page