ಕಾಸರಗೋಡು: ನಗರಸಭಾ ವ್ಯಾಪ್ತಿಯ ಕೊಳಕೆಬೈಲಿನಲ್ಲಿ ನಿನ್ನೆ ಮನೆಯೊಂದು ಬೆಂಕಿಗಾಹುತಿ ಯಾಗಿದೆ. ಇಲ್ಲಿನ ದಿ| ಗಣಪತಿ ಆಚಾರಿ ಎಂಬವರ ಪತ್ನಿ ಪುಷ್ಪಾರ ಮಾಲಕತ್ವದಲ್ಲಿರುವ ಅನುಗ್ರಹ ನಿವಾಸ್ ಉರಿದು ನಾಶಗೊಂಡಿದೆ. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆ ಘಟನೆ ನಡೆದಿದೆ. ಮನೆಯ ಮೇಲ್ಛಾವಣಿ ಪೂರ್ಣವಾಗಿ ನಾಶಗೊಂಡಿದ್ದು, ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ಮನೆ ಉರಿದು ನಾಶಗೊಂಡ ಹಿನ್ನೆಲೆಯಲ್ಲಿ ಪುಷ್ಪಾ ಹಾಗೂ ಕುಟುಂಬಕ್ಕೆ ವಾಸಿಸಲು ವ್ಯವಸ್ಥೆ ಇಲ್ಲದಂತಾಗಿದೆ.







