ಇಬ್ಬರು ಪುಟ್ಟ ಮಕ್ಕಳ ಸಹಿತ ಒಂದೇ ಕುಟುಂಬದ ನಾಲ್ಕು ಮಂದಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ:  ಪಯ್ಯನ್ನೂರು ಬಳಿಯ ರಾಮಂತಳಿ ಎಂಬಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಡಕ್ಕುಂಬಾಡ್ ಕೆ.ಟಿ. ಕಲಾಧರನ್ (38), ತಾಯಿ ಉಷಾ (60), ಕಲಾಧರನ್‌ರ ಮಕ್ಕಳಾದ ಹಿಮ(5), ಕಣ್ಣನ್ (2) ಎಂಬಿವರು ಮೃತಪಟ್ಟವರಾಗಿದ್ದಾರೆ.  ಉಷಾ ಹಾಗೂ ಕಲಾಧರನ್ ನೇಣು ಬಿಗಿದ ಸ್ಥಿತಿಯಲ್ಲೂ, ಮಕ್ಕಳು ಕೆಳಗೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳಿಗೆ ವಿಷ ನೀಡಿದ ಬಳಿಕ ಉಷಾ ಹಾಗೂ ಕಲಾಧರನ್ ನೇಣು ಬಿಗಿದು ಸಾವಿಗೀಡಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.

ನಿನ್ನೆ ರಾತ್ರಿ 8 ಗಂಟೆ ವೇಳೆ ಘಟನೆ ನಡೆದಿದೆ. ಮನೆಯಲ್ಲಿ ಸಂಜೆ ಯಾರನ್ನೂ ಕಾಣದ ಹಿನ್ನೆಲೆಯಲ್ಲಿ ಕಲಾಧರನ್‌ರ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ನಡೆಸಿದ ಪರಿಶೀಲನೆ ವೇಳೆ ನಾಲ್ಕು ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ಆತ್ಮಹತ್ಯೆ ಕುರಿತಾಗಿ ಬರೆದ ಪತ್ರವೊಂದು ಪತ್ತೆಯಾಗಿದೆ. ಕೌಟುಂಬಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವೆಂದು ಪೊಲೀಸರು ಹೇಳುತ್ತಿದ್ದಾರೆ.  ಆತ್ಮಹತ್ಯೆ ಪತ್ರದಲ್ಲಿರುವ  ಮಾಹಿತಿಗಳನ್ನು ಆಧರಿಸಿ ಮುಂದಿನ ತನಿಖೆ ನಡೆಯಲಿದೆಯೆಂದು  ಪೊಲೀಸರು ತಿಳಿಸಿದ್ದಾರೆ. ಕಲಾಧರನ್ ಹಾಗೂ ಪತ್ನಿ ನಯನ್‌ತಾರಾ ಮಧ್ಯೆ ಕುಟುಂಬ ನ್ಯಾಯಾಲಯದಲ್ಲಿ ಕೇಸು ಇದೆ ಎಂದು  ತಿಳಿದುಬಂದಿದೆ.

RELATED NEWS

You cannot copy contents of this page