ಕಾಸರಗೋಡು: ಕಾಸರಗೋಡು ನಗರದ ಎಸ್‌ಟಿಯು ಕಾರ್ಯಕರ್ತರು ಹಾಗೂ ತಲೆಹೊರೆ ಕಾರ್ಮಿಕರಾದ ಶಬರಿಮಲೆ ತೀರ್ಥಾಟಕರಿಗೆ ಟೌನ್ ಎಸ್‌ಟಿಯು ಕಮಿಟಿ ವತಿಯಿಂದ ಬೀ ಳ್ಕೊಡುಗೆ ನೀಡಲಾಯಿತು. ಕಾರ್ಯ ಕ್ರಮವನ್ನು ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಂಞಾಲಿಕುಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಕೇರಳ ಮತ ಸೌಹಾರ್ದತೆ ಹಾಗೂ ಸಹೋದ ರತೆಯ ನಾಡಾಗಿದೆ. ಎಲ್ಲಾ ಮತ ವಿಭಾಗಗಳ ನಂಬಿಕೆಗಳು ಸಂರಕ್ಷಿಸಲ್ಪಡ ಬೇಕು. ಅದರೊಂದಿಗೆ ಎಲ್ಲಾ ಮತಗಳ ಆಚರಣೆಗಳನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ನಗರದ ತಲೆಹೊರೆ ಕಾರ್ಮಿಕರಾದ ಪ್ರವೀಣ್ ಕುಮಾರ್, ತುಷಾರ್ ಶೆಟ್ಟಿ, ರಮೇಶ್ ಕೆ, ಎ. ಮಾಧವ, ಕೆ. ಸಂತೋಷ್, ಪಿ. ಜಗದೀಶ, ಶಿವನ್, ಎಚ್. ಸುರೇಶ್ ಎಂಬೀ ಎಸ್‌ಟಿಯು ಕಾರ್ಯಕರ್ತರಿಗೆ ಬೀಳ್ಕೊಡುಗೆ ನೀಡಲಾಯಿತು. ಎಸ್‌ಟಿಯು ರಾಷ್ಟ್ರೀಯ ಉಪಾಧ್ಯಕ್ಷ ಎ. ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಎಸ್‌ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮುಹಮ್ಮದ್ ಅಶ್ರಫ್, ಉಪಾಧ್ಯಕ್ಷ ಅಶ್ರಫ್ ಎಡನೀರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಲಿಬ್ ಪಾರಕಟ್ಟೆ, ಪಿ.ಬಿ. ಶಫೀಕ್, ಕೆ.ಟಿ. ಅಬ್ದುಲ್ ರಹ್ಮಾನ್, ಜಲೀಲ್ ತುರ್ತಿ, ಎ. ರಘು, ಸಹೀದ್ ಎಸ್.ಎ, ಶಿಹಾಬ್ ಪಾರಕಟ್ಟೆ, ಇಬ್ರಾಹಿಂ ಕಲೀಲ್, ಬಶೀರ್ ಎ.ಬಿ.ಟಿ, ಸುಹೈಲ್ ಪಾರಕಟ್ಟೆ ಮಾತನಾಡಿದರು.







