ಪುತ್ರಿಯನ್ನು ಕೊಲೆಗೈದು ತಂದೆ ಆತ್ಮಹತ್ಯೆಗೈದ ಘಟನೆ: ಬಾಲಕಿ ವರ್ಷಗಳ ಕಾಲ ದೌರ್ಜನ್ಯಕ್ಕೀಡಾಗಿದ್ದಾಳೆಂದು ವರದಿ

ಕೊಚ್ಚಿ: ಎಳಮಕ್ಕರದಲ್ಲಿ ಪುತ್ರಿಯನ್ನು ಕೊಲೆಗೈದು ತಂದೆ ಆತ್ಮಹತ್ಯೆಗೈದ ಘಟನೆಯಲ್ಲಿ ಆತಂಕಗೊಳ್ಳುವ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದೆ. ಬಾಲಕಿ ಹಲವು ವರ್ಷಗಳಿಂದ ದೌರ್ಜನ್ಯಕ್ಕೀಡಾಗಿರುವುದಾಗಿಯೂ ಸಾವು ಸಂಭವಿಸುವ ಗಂಟೆಗಳ ಹಿಂದೆಯೂ ದೌರ್ಜನ್ಯ ನಡೆದಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ. ಆದರೆ ಬಾಲಕಿಯನ್ನು ದೌರ್ಜನ್ಯಗೈದಿ ರುವುದು ಯಾರು, ಎಲ್ಲಿ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಎಳಮಕ್ಕರ ಪೊಲೀಸ್ ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪುತ್ರಿ ದೌರ್ಜನ್ಯಕ್ಕೀಡಾದ ಮಾಹಿತಿ ತಿಳಿದಿಲ್ಲವೆಂದು ಕೊಚ್ಚಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ತಾಯಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದರು. ಕಳೆದ ತಿಂಗಳ 16ರಂದು ಎಳಮಕ್ಕರದಲ್ಲಿ ತಂದೆ ಹಾಗೂ ಪುತ್ರಿ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಾಯಿ ಕೆಲಸ ಮುಗಿಸಿ ಮನೆಗೆ ತಲುಪಿದಾಗ ಇವರಿಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ತಂದೆಯ ಮೃತದೇಹ, ವಿಷ ಸೇವಿಸಿದ ಸ್ಥಿತಿಯಲ್ಲಿ ಪುತ್ರಿಯ ಮೃತದೇಹ ಕಂಡು ಬಂದಿದೆ. ಬಳಿಕ ಕಳಮಶ್ಶೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪ್ರಾಥಮಿಕ ವರದಿಯಲ್ಲಿ ಬಾಲಕಿಯ ಗೌಪ್ಯ ಸ್ಥಳಗಳಲ್ಲಿ ಗಾಯಗಳಿದ್ದ ಬಗ್ಗೆ ಪತ್ತೆಹಚ್ಚಲಾಗಿದೆ. ಬಳಿಕ ಸಮಗ್ರ ತನಿಖೆ ನಡೆಸಿ ಗೈನಾಕೋಲೆಜಿಸ್ಟ್‌ಗೆ ವರದಿ ಹಸ್ತಾಂತರಿಸಲಾಗಿತ್ತು. ಅಂತಿಮ ವರದಿಯಲ್ಲಿ ಬಾಲಕಿ ಒಂದು ವರ್ಷದಿಂದ ದೌರ್ಜ ನ್ಯಕ್ಕಿ ಡಾಗುತ್ತಿದ್ದುದು ಪತ್ತೆಹಚ್ಚಲಾಗಿದೆ.

You cannot copy contents of this page