ಪುತ್ರ ವಿದೇಶದಿಂದ ತಲುಪುವ ಗಂಟೆಗಳ ಮೊದಲು ತಂದೆ, ತಾಯಿಯರ ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ

ಕಣ್ಣೂರು: ಇಲ್ಲಿಗೆ ಸಮೀಪದ ಅಲವಿಲಿಲ್ ಎಂಬಲ್ಲಿ ದಂಪತಿ ಬೆಂಕಿ ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಲ್ಲಾಳತ್ತಿಲ್ ಪ್ರೇಮರಾಜನ್, ಎ.ಕೆ. ಶ್ರೀಲೇಖ ಎಂಬಿವರು ಮೃತಪಟ್ಟವರು. ಸಚಿವ ಎ.ಕೆ. ಶಶೀಂದ್ರನ್‌ರ ಸಹೋದರಿಯಾಗಿದ್ದಾರೆ ಇವರು. ಮನೆಯ ಮಲಗುವ ಕೊಠಡಿಯಲ್ಲಿ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಸಂಜೆ 5 ಗಂಟೆ ವೇಳೆ ಘಟನೆ ತಿಳಿದು ಬಂದಿದೆ. ಚಾಲಕ ಕರೆದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪುತ್ರ ವಿದೇಶದಿಂದ ತಲುಪುವುದಕ್ಕೆ ಗಂಟೆಗಳ ಮುಂಚಿತ ಇವರಿಬ್ಬರ ಮೃತದೇಹ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page