ಕುಂಬಳೆ: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಸಮೀಪ ಪರಸ್ಪರ ಹೊಡೆದಾಡಿಕೊಂಡ ತಂಡಗಳನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದರು. ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ೫೦ ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ಕಲೋತ್ಸವ ಮಧ್ಯೆ ವಿದ್ಯಾರ್ಥಿಗಳೊಳಗೆ ಉಂಟಾದ ತರ್ಕವೇ ಘರ್ಷಣೆಯಲ್ಲಿ ಕೊನೆಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲಾ ಪರಿಸರದಿಂದ ಆರಂಭಗೊಂಡ ಘರ್ಷಣೆ ರಾಷ್ಟ್ರೀಯ ಹೆದ್ದಾರಿವರೆಗೆ ತಲುಪಿದೆ. ಈ ವಿಷಯ ತಿಳಿದು ತಲುಪಿದ ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ತಂಡಗಳನ್ನು ಲಾಠಿ ಬೀಸಿ ಚದುರಿಸಿದರೆಂದು ಪೊಲೀಸ್ ಮೂಲಗಳು ತಿಳಿಸಿವೆ.







