ಡಾಮರ್ ಡಬ್ಬಿಯಲ್ಲಿ ಸಿಲುಕಿಕೊಂಡ 6 ನಾಯಿಮರಿಗಳನ್ನು ರಕ್ಷಿಸಿದ ಅಗ್ನಿಶಾಮಕ ದಳ

ಬದಿಯಡ್ಕ: ರಸ್ತೆ ಬದಿಯ ಡಾಮರ್ ಡಬ್ಬಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಆರು ಪುಟ್ಟ ನಾಯಿಮರಿಗಳನ್ನು ಕಾಸರಗೋಡು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ನಿನ್ನೆ ನಡೆದಿದೆ.

ಚೂರಿಪಳ್ಳ ಮಾವಿನಕಟ್ಟೆ ರಸ್ತೆ ಬಳಿಯ ಡಾಮರು ತುಂಬಿದ ಡ್ರಮ್ ಮಗುಚಿ ಬಿದ್ದಿತ್ತು. ಉರಿ ಬಿಸಿಲು ತಾಳಲಾಗದೆ ಅಲ್ಲಿದ್ದ ಆರು ನಾಯಿಮರಿಗಳು ಡ್ರಮ್‌ನೊಳಗೆ ನುಗ್ಗಿದವು. ಬಿಸಿಲಿನ ಉರಿಗೆ ಡಾಮರು ಕರಗಿದ್ದು ಅದರಿಂದಾಗಿ ಅದರಲ್ಲಿ ಮಾಮರಿನಲ್ಲಿ ನಾಯಿಮರಿಗಳು ಮಾಸಿಲುಕಿಕೊಂಡು ಹೊರಬರಲು ಸಾಧ್ಯವಾಗದೆ ಕೂಗಾಡತೊಡಗಿದವು. ಇದನ್ನು ಕಂಡ ಸ್ಥಳೀಯ ರಾಜೇಶ್ ಲೋಬೋ ಎಂಬವರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸುಕು ಬಿ. ರ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಡ್ರಮ್‌ನ್ನು ಒಡೆದು ಡೀಸೆಲ್ ಉಪಯೋಗಿಸಿ ನಾಯಿಮರಿಗಳನ್ನು ಹೊರ ತೆಗೆದರು ಮಾತ್ರವಲ್ಲದೆ ಡೀಸೆಲ್ ಬಳಸಿ ನಾಯಿಗಳ ಮೇಲೆ ಅಂಟಿದ ಡಾಮರ್ ತೊಳೆದು ಅವುಗಳ ಪ್ರಾಣ ಉಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ರಾಜೇಶ್ ಪಾವೂರು, ಶೈಜು ಹಾಗೂ ಹೋಮ್‌ಗಾರ್ಡ್ ರಾಜು ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page