ಕುಟುಕುಟು ಜುಗಾರಿ: ಐದು ಮಂದಿ ಬಂಧನ

ಕಾಸರಗೋಡು: ಕುತ್ತಿಕ್ಕೋಲು ಶ್ರೀ ತಂಬುರಾಟಿ ಕ್ಷೇತ್ರ ಸಮೀಪದ  ಗುಡ್ಡೆ ಪ್ರದೇಶದಲ್ಲಿ ನಡೆಯುತ್ತಿದ್ದ ಕುಟುಕುಟು ಜುಗಾರಿ ಕೇಂದ್ರಕ್ಕೆ ಬೇಡಗಂ ಪೊಲೀಸರು ದಾಳಿ ನಡೆಸಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಅಡೂರು ಪಳ್ಳಂಜಿ ಪುದಿಯಕಂಡಂ ಹೌಸ್ ನಿವಾಸಿ  ಗಂಗಾಧರನ್(41), ಬಂದಡ್ಕ ಕುನ್ನುಮ್ಮಲ್ ನಿವಾಸಿ ಅಬೂಬಕ್ಕರ್ (24) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಇವರ ಕೈಯಿಂದ 3880 ರೂಪಾಯಿ ಗಳನ್ನು ವಶಪಡಿಸಲಾಗಿದೆ. ಇಂದು ಮುಂಜಾನೆ 1.30ರ ವೇಳೆ   ಜುಗಾರಿ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಮೊನ್ನೆ ರಾತ್ರಿಯೂ ಇದೇ ಸ್ಥಳದಲ್ಲಿ ಕುಟುಕುಟು ಜುಗಾರಿ ದಂಧೆ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮೂರು ಮಂದಿಯನ್ನು ಬಂಧಿಸಿದ್ದರು. ಬಂದಡ್ಕ ಮಾರಿಪಡ್ಪು ಕುನ್ನೇಲ್ ಹೌಸ್‌ನ ಎನ್.ಕೆ. ರಾಧಾ ಕೃಷ್ಣನ್ (45), ಚಾಮಕೊಚ್ಚಿ ಅಣ್ಣಪ್ಪಾ ಡಿಯ ಎಸ್. ಸುಧಾಕರ (39), ಬೇ ಡಗಂ ಅಂಬಿಲಾಡಿ ಹೌಸ್‌ನ ಬಿ.ಅಶ್ರಫ್ (38)  ಎಂಬಿವರನ್ನು ಬಂಧಿಸಿ  3470ರೂ. ವಶಪಡಿಸಲಾಗಿತ್ತು.

RELATED NEWS

You cannot copy contents of this page