ಮಂಜೇಶ್ವರ ಪಂ. ಮಾಜಿ ಸದಸ್ಯ ನಿಧನ

ಮಂಜೇಶ್ವರ: ಉದ್ಯಾವರ ನಿವಾಸಿ, ಮಂಜೇಶ್ವರ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ (೫೩)ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಉಲ್ಬಣ ಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಮೊನ್ನೆ ರಾತ್ರಿ ನಿಧನ ಸಂಭವಿಸಿದೆ. ಪಂಚಾಯತ್‌ನ 20ನೇ ವಾರ್ಡ್ ಮಾಜಿ ಸದಸ್ಯರಾಗಿ ದ್ದರು. 10ನೇ ಮೈಲು ಹಾಗೂ ಕುಂಜತ್ತೂರಿನಲ್ಲಿ ಅಂಡರ್ ಪಾಸ್‌ಗಾಗಿ ಹೋರಾಟ ಸಮಿತಿ ರೂಪಿಸಿ ಅದರ ನೇತೃತ್ವ ವಹಿಸಿದ್ದರು. ವಿವಿಧ ಹೋರಾಟಗಳಲ್ಲಿ ಭಾಗಿಯಾಗಿದ್ದರು. ದಿ| ಮೊಹಮ್ಮದ್ ಹಾಜಿ- ದಿ| ಬಿಫಾತಿಮ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಸಬೀನ (ಪಂ. 23ನೇ ವಾರ್ಡ್ ಸದಸ್ಯೆ, ಅಧ್ಯಾಪಿಕೆ), ಮಕ್ಕಳಾದ ನೇಹ, ಅಮೀನ್, ನವಾಲ್, ಅಬ್ದುಲ್ ನೌಮಾನ್, ಸಹೋದರ- ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮನೆಗೆ ವಿವಿಧ ರಾಜಕೀಯ ಮುಖಂಡರು, ಕಾರ್ಯಕರ್ತರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

RELATED NEWS

You cannot copy contents of this page