ಮಾಜಿ ಸಚಿವ ಇಬ್ರಾಹಿಂ ಕುಂಞಿ ನಿಧನ

ಕೊಚ್ಚಿ: ಮಾಜಿ ಸಚಿವಹಾಗೂ ಮುಸ್ಲಿಂ ಲೀಗ್‌ನ ರಾಜ್ಯ ಉಪಾಧ್ಯಕ್ಷ ರಾಗಿರುವ ವಿ.ಕೆ.ಇಬ್ರಾಹಿಂ ಕುಂಞಿ (73)  ಅಸೌಖ್ಯದಿಂದ ಕೊಚ್ಚಿಯ ಪಾಲಿಯೇಟಿವ್ ಕೇರ್ ಆಸ್ಪತ್ರೆಯಲ್ಲಿ ನಿನ್ನೆ ನಿಧನಹೊಂದಿದರು.

ಇಬ್ರಾಹಿಂ ಕುಂಞಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿ ದ್ದರು. ಮುಸ್ಲಿಂ ಲೀಗ್ ನೇತಾರ ಪಿ.ಕೆ. ಕುಂಞಾಲಿಕುಟ್ಟಿ ಯವರು ೨೦೦೫ರಲ್ಲಿ ತಮ್ಮ ಕೈಗಾರಿಕಾ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ತೆರವುಗೊಂಡ ಆ ಸ್ಥಾನಕ್ಕೆ ಇಬ್ರಾಹಿಂ ಕುಂಞಿಯವರನ್ನು ನೇಮಿಸಲಾಗಿತ್ತು.  ಆಗ ಅವರು ಮಟ್ಟಾಂಚೇರಿಯ ಶಾಸಕರಾಗಿದ್ದರು. ನಂತರ 2011ರಲ್ಲಿ ಕಳಮಶ್ಶೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಅವರು ಲೋಕೋಪಯೋಗಿ ಖಾತೆ ಸಚಿವರಾದರು. 2016ರಲ್ಲಿ  ಅವರು ಶಾಸಕನಾಗಿ ಗೆದ್ದು ಬಂದಿದ್ದರು. ಇವರು ಎರ್ನಾಕುಳಂ ಜಿಲ್ಲೆಯ ಕೊಂಙಾರ್‌ಪಿಳ್ಳಿ ನಿವಾಸಿಯಾ ಗಿದ್ದಾರೆ. ಅಂತ್ಯಕ್ರಿಯೆಯನ್ನು ಅಲಂಙಾಡ್ ಜುಮಾ ಮಸೀದಿಗೆ  ಸೇರಿದ ಸ್ಮಶಾನದಲ್ಲಿ ಇಂದು  ಬೆಳಿಗ್ಗೆ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

RELATED NEWS

You cannot copy contents of this page