ನಕಲಿ ಚಿನ್ನಾಭರಣ ಅಡವಿರಿಸಿ ಖಾಸಗಿ ಸಂಸ್ಥೆಯಿಂದ 11 ಲಕ್ಷ ರೂ. ಸಾಲ ಪಡೆದು ವಂಚನೆ

ಕಾಸರಗೋಡು: ಒಳಗೆ ಅರಗು ಹಾಗೂ ಹೊರಗೆ ಚಿನ್ನ ಲೇಪಿಸಿ ನಿರ್ಮಿಸಿದ ಚಿನ್ನಾಭರಣಗಳನ್ನು ಅಡವಿರಿಸಿ 11,44,000 ರೂ. ಸಾಲ ತೆಗೆದು ವಂಚಿಸಿರುವುದಾಗಿ ದೂರಲಾಗಿದೆ. ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಕಾಸರಗೋಡು ಬ್ರಾಂಚ್ ಮೆನೇಜರ್ ಯು.ಪಿ. ಕಿರಣ್ ಕುಮಾರ್ ನೀಡಿದ ದೂರಿನಂತೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಪೊಯಿನಾಚಿ ಚೆರುಕರ ನಿವಾಸಿ ಅಬ್ದುಲ್ ಮಜೀದ್ (೫೨)ನ ವಿರುದ್ಧ ಕೇಸು ದಾಖಲಿಸಲಾಗಿದೆ. 2026 ಫೆಬ್ರವರಿ 25ರಂದು ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. 108.407 ಗ್ರಾಂ ತೂಕದ ಎರಡು ಬಳೆಗಳು, ಒಂದು ನೆಕ್ಲೆಸ್ ಎಂಬಿವುಗಳನ್ನು ಅಡವಿರಿಸಿ ಹಣ ಪಡೆದಿರು ವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page