ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹೃದಯದಲ್ಲಿ ಪೋಣಿಸಿದಷ್ಟು ಭಾಷೆಯ ಪ್ರೌಢತೆ ಪ್ರಜ್ವಲಿಸುತ್ತದೆ- ಬಿ.ಎಂ. ಹನೀಫ್

ಪೈವಳಿಕೆ: ಕನ್ನಡ ಭಾಷೆ, ಸಂಸ್ಕೃತಿಯ ಪ್ರೀತಿ ಹೃದಯದಲ್ಲಿ ಪೋಣಿಸಿದಷ್ಟು ಭಾಷೆಯ ಪ್ರೌಢತೆ ಪ್ರಜ್ವಲಿಸುತ್ತದೆ. ಹಡಿನಾಡು, ಹೊರ ನಾಡುಗಳಲ್ಲಿ ಇದನ್ನು ಕಾಣಬಹುದು ಎಂದು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಶ್ರಯದಲ್ಲಿ ಪೈವಳಿಕೆ ಕಾಯರ್‌ಕಟ್ಟೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಭಾಷಾ ವೈವಿಧ್ಯತೆಯಿಂದ ಕನ್ನಡ ಭಾಷೆ ಉಳಿದಿದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಭಾಷೆಯನ್ನು ಸಂರಕ್ಷಿಸದಿದ್ದಲ್ಲಿ ಆಪತ್ತು ಇದೆ. ಭಾಷೆಯ ಮೂಲ ಸಂಸ್ಕೃತಿ, ಸಾಹಿತ್ಯವನ್ನು ಕಟ್ಟುವುದಾಗಿದೆ. ಪಂಪನಿAದ ತೊಡಗಿ ಆಧುನಿಕ ಡಾ.ರಾಜಕುಮಾರ್ ವರೆಗಿನ ಸಾಧಕರು ತಮ್ಮದೇ ಕೊಡುಗೆಗಳ ಮೂಲಕ ಭಾಷೆಗೆ ಭದ್ರ ನೆಲೆಗಟ್ಟೊಂದನ್ನು ರೂಪಿಸಿ ತೆರೆದಿಟ್ಟಿದ್ದಾರೆ. ‘ನಾಲಗೆ ಕುಲವಂ ಪೇಳ್ವದು’ ಎಂದು ಪಂಪನ ಉಲ್ಲೇಖ ದಂತೆ ನಮ್ಮ ಮಾತುಗಳು, ಉಸಿರಾಟ ಕನ್ನಡ ಭಾಷಾ ಬೆಳವಣಿಗೆಯ ತುಡಿತದೊಂದಿಗೆ ಮೇಳೈಸಿದಾಗ ಭಾಷೆ ಬೆಳೆಯುತ್ತದೆ. ಅದರಲ್ಲಿ ಶುದ್ಧತೆ, ಬಳಕೆಯ ಹಿಡಿತ ಮೂಡಿಬರಬೇಕೆಂದು ಅವರು ತಿಳಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿಯ ತುಳು, ಬ್ಯಾರಿ, ಹವ್ಯಕ, ಶಿವಳ್ಳಿ, ಕೊಂಕಣಿ ಮೊದಲಾದ ಹತ್ತು ಹಲವು ಉಪಭಾಷೆಗಳು ಬೆಳೆಸಿದ ಮಹಾವೃಕ್ಷ ಕನ್ನಡ ಎಂಬುದನ್ನು ತಲಸ್ಪರ್ಶಿಯಾಗಿ ಗಮನಿಸಬೇಕು. ಆ ಉಪಭಾಷೆಗಳಿಗಾಗುವ ನೋವುಗಳು ಕನ್ನಡದ ಮೇಲೆ ದೊಡ್ಡ ಪ್ರತ್ಯಾಘಾತವನ್ನೇ ಸೃಷ್ಟಿಸಬಹುದು. ಎಲ್ಲವನ್ನೂ ಒಳಗೊಂಡ ಏಕ ಸ್ವರೂಪದ ಸಮಷ್ಠಿ ಭಾವವೇ ನಮ್ಮ ಹಿರಿಮೆ ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾಬಲೇಶ್ವರ ಭಟ್ ಎಡಕ್ಕಾನ, ಶಿವಾನಂದ ಕೋಟ್ಯಾನ್ ಕಟಪಾಡಿ, ಇವರಿಗೆ ಪೌರ ಸನ್ಮಾನ ನಡೆಯಿತು. ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ಪೌರ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಕಾರ್ಮಿಕ ಪರಿಷತ್ತು ಬೆಂಗಳೂರು ಅಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಗಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿ ದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ ರಾಜ್ಯೋತ್ಸವ ಸಂದೇಶ ವಾಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಜಿಲ್ಲಾಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೇಮೂಲೆ, ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಎನ್., ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಕೋಶಾಧಿಕಾರಿ ಜೆಡ್.ಎ.ಕಯ್ಯಾರ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ್ ಎ., ಧಾರ್ಮಿಕ ಮುಖಂಡ ಅರಿಬೈಲು ಗೋಪಾಲ ಶೆಟ್ಟಿ, ವಾಮನ ರಾವ್ ಬೇಕಲ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ ಬಿ.ಎನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಕರ್ನಾಟಕ ಜಾನಪದ ಪರಿಷತ್ತು ದ.ಕ. ಜಿಲ್ಲಾ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಉದ್ಯಮಿ ಯುವರಾಜ ಸಾಲಿಯಾನ್, ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್ ನಾಸಿ., ಗಮಕ ಕಲಾ ಪರಿಷತ್ತು ಅಧ್ಯಕ್ಷ ಟಿ. ಶಂಕರನಾರಾಯಣ ಭಟ್, ಪ್ರಾಂಶುಪಾಲ ಡೊಮಿನಿಕ್ ಆಗಸ್ಟಿನ್, ಮುಖ್ಯೋಪಾ ಧ್ಯಾಯಿನಿ ಭಾಗ್ಯಲಕ್ಷ್ಮಿ, ಆದಂ ಬಳ್ಳೂರು, ಸುಮಿತ್ರಾ, ರಮೇಶ್ ಶೆಟ್ಟಿ ಬೈಂದೂರ್, ಅಸೀಸ್ ಕಳಾಯಿ ಉಪಸ್ಥಿತರಿದ್ದರು.
ಕಾಯರ್‌ಕಟ್ಟೆ ಶಾಲೆಯ ಪಿಟಿಎ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಯು.ಎ.ಇ ಘಟಕ ದುಬೈ ಹಾಗೂ ಒಮಾನ್ ಘಟಕ, ಸಪ್ತಸ್ವರ ಸಿಂಗಾರಿ ಮೇಳ ಆವಳ ಮಠ, ಯೋಗ ಫಾರ್ ಕಿಡ್ಸ್ ಕರಂದಕ್ಕಾಡು, ಸುಭಾಶ್ ಫ್ರೆಂಡ್ಸ್ ಸರ್ಕಲ್ ಲಾಲ್ ಬಾಗ್, ಪೈವಳಿಕೆ ಸಹಕರಿಸಿದ್ದರು.
ಈ ಸಂದರ್ಭ ವೇಮಗಲ್ ಸೋಮಶೇಖರ್ (ಸಾಹಿತಿ), ಡಾ.ಬಿ.ನಾರಾಯಣ ನಾಯ್ಕ್ (ವೈದ್ಯಕೀಯ), ರೊನಾಲ್ಡ್ ಮಾರ್ಟಿಸ್ (ಹೊರನಾಡ ಕನ್ನಡ ಸೇವೆ), ಪ್ರಕಾಶ್ ಕುಂಪಲ (ಉದ್ಯಮ, ಸಮಾಜ ಸೇವೆ), ಕಟಪಾಡಿ ಸತ್ಯೇಂದ್ರ ಪೈ (ಸಿನೆಮಾ), ಶಿವಶಂಕರ ಭಟ್ ದಿವಾಣ (ಯಕ್ಷಗಾನ), ಕೃಷ್ಣ ಜಿ.ಮಂಜೇಶ್ವರ (ರಂಗಭೂಮಿ), ನವೀನ್ ಮೊಂತೇರೋ (ದೇಹದಾರ್ಡ್ಯ ಪಟು), ಸಂದೀಪ್ ಪುರಂದರ ಶೆಟ್ಟಿ (ಕ್ರೀಡೆ, ಕಲಾಕ್ಷೇತ್ರ), ಡಾ.ನೂರಾ ಕಲ್ಲಡ್ಕ (ವೈದ್ಯಕೀಯ), ವಿದುಷಿ ತೀರ್ಥ ಕಟೀಲು (ಜನಪದ) ಸುಜಾತ ಮುಳ್ಳೇರಿಯಾ(ನೃತ್ಯ), ಯಕ್ಷಗಾನ ಅಭ್ಯಾಸ ಕೇಂದ್ರ (ದುಬೈ) ಯು.ಎ.ಇ. ಪ್ರಶಸ್ತಿ ಪ್ರದಾನ ಹಾಗೂ ದ.ಕ.ಜಿಲ್ಲಾ ರಾಜ್ಯೋತ್ಸವ ಅಭಿನಂದನ ಪುರಸ್ಕೃತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಚನಿಯಪ್ಪ ನಾಯ್ಕ ಎನ್. ಸ್ವಾಗತಿಸಿ, ವಂದಿಸಿದರು. ಅಖಿಲೇಶ್ ನಗುಮುಗಂ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ನಾಯ್ಕಾಪು ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಅವರಿಂದ ಗಾನ ಮಾಧುರಿ, ತೇಜಕುಮಾರಿ ಶಿಷ್ಯವೃಂದವರಿAದ ಯೋಗ ನೃತ್ಯ, ಗಜಾನನ ನಾಟ್ಯಾಂಜಲಿ ಮುಳ್ಳೇರಿಯ ಇವರಿಂದ ನೃತ್ಯ ನೃತ್ಯಂ, ಧನ್ವಿ ರೈ ಕೋಟೆ ಪಾಣಾಜೆ ಅವರಿಂದ ಶಾಸ್ತ್ರೀಯ ನೃತ್ಯ, ಸ್ಕಂದ ಪ್ರಸಾದ್ ಪೆರ್ಮುದೆ ಅವರಿಂದ ಸಾಮಾಜಿಕ ಕಥಾ ಪ್ರಸಂಗ ನಡೆಯಿತು.

RELATED NEWS

You cannot copy contents of this page