ಮಜಿಬೈಲು ಬಳಿ ಜುಗಾರಿ ದಂಧೆ: ಓರ್ವ ಸೆರೆ; ಹಲವರು ಪರಾರಿ

ಮಂಜೇಶ್ವರ: ಜುಗಾರಿ ಕೇಂದ್ರಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಓರ್ವನನ್ನು ಸೆರೆಹಿಡಿದಿದ್ದಾರೆ. ಈ ವೇಳೆ ಹಲವರು ಓಡಿ ಪರಾರಿಯಾಗಿದ್ದಾರೆ.

ಕಡಂಬಾರು ದುರ್ಗಿಪಳ್ಳ ಚೇತನ್ ನಗರದ ಪ್ರಶಾಂತ್ ಕುಮಾರ್ ಟಿ (38) ಬಂಧಿತ ವ್ಯಕ್ತಿಯಾಗಿದ್ದಾನೆ. ಜುಗಾರಿ ಸ್ಥಳದಿಂದ 3540 ರೂ. ವಶಪಡಿಸಿರುವುದಾಗಿ ಪೊಲೀಸರು  ತಿಳಿಸಿದ್ದಾರೆ.  ಮಜಿಬೈಲು ಪಟ್ಟತ್ತೂರು ಕ್ಷೇತ್ರ ಸಮೀಪದ ಹಿತ್ತಿಲಲ್ಲಿ ಇಂದು ಮುಂಜಾನೆ 4.30ರ ವೇಳೆ ಜುಗಾರಿ ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐ ವೈಷ್ಣವ್ ನೇತೃತ್ವದ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದರು. ಮಂಜೇಶರದ ವಿವಿಧೆಡೆಗಳಲ್ಲಿ ಜುಗಾರಿ, ಕೋಳಿ ಅಂಕಗಳಂತಹ ದಂಧೆ ಅಲ್ಪ ಕಾಲದಿಂದ ತೀವ್ರಗೊಂಡಿರುವುದಾಗಿ ದೂರಲಾಗಿದೆ.  ಹಗಲು-ರಾತ್ರಿಯೆನ್ನದೆ ಈ ದಂಧೆ ನಡೆಯುತ್ತಿದ್ದು ಅಲ್ಲಿಗೆ ದೂರದೂರುಗಳಿಂದಲೂ ಜನರು ತಲುಪುತ್ತಿದ್ದಾರೆಂಬ ಕೇಳಿಬರುತ್ತಿದೆ.

You cannot copy contents of this page