ಬದಿಯಡ್ಕ ಮಂಡಲ ಕಾಂಗ್ರೆಸ್‌ನಿಂದ ಗಾಂಧಿಜಯಂತಿ ಆಚರಣೆ

ಬದಿಯಡ್ಕ: ಬದಿಯಡ್ಕ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆ ನಡೆಸಲಾಯಿತು. ಇದರಂಗವಾಗಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ನೇತಾರರಾದ ಚಂದ್ರಹಾಸ ರೈ,  ನಾರಾಯಣ ಮಣಿಯಾಣಿ ನೀರ್ಚಾಲು,ಗಂಗಾಧರ ಗೋಳಿಯಡ್ಕ,  ರಾಮ ಪಟ್ಟಾಜೆ, ಕೃಷ್ಣದಾಸ್ ಡಿ, ಸರಶೀರ್ವಾಕ್ಷನ್ ನಂಬ್ಯಾರ್, ಶ್ರೀನಾಥ್ ಬದಿಯಡ್ಕ, ಕುಮಾರನ್ ನಾಯರ್, ಚಂದ್ರಹಾಸನ್ ಮಾಸ್ತರ್, ಮುಹಮ್ಮದ್ ಅರಮನೆ, ವಾಮನ ನಾಯ್ಕ, ಸತೀಶ ಪೆರುಮುಂಡ, ಸುಧೀರ್ ಬಾಂಜತ್ತಡ್ಕ, ರಾಮಕೃಷ್ಣನ್, ರವೀಂದ್ರ ಕುಂಟಾಲುಮೂಲೆ, ಮ್ಯಾಥ್ಯು, ರಾಜನ್ ಮಾನ್ಯ ಉಪಸ್ಥಿತರಿದ್ದರು. ಮಂಡಲ ಕಾರ್ಯದರ್ಶಿ ಲೋಹಿತಾಕ್ಷನ್ ಸ್ವಾಗತಿಸಿ,  ಕೇಶವ ಪಾಟಾಳಿ ವಂದಿಸಿದರು.

You cannot copy contents of this page