ಕಾಸರಗೋಡು: 13ರ ಹರೆಯದ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಪರಪ್ಪ ಕ್ಲಾಯಿಕೋಡ್‌ನ ರಸಾಕ್ (60) ಎಂಬಾತನನ್ನು ವೆಳ್ಳರಿಕುಂಡ್ ಎಸ್‌ಐ ಸಿ. ಸುಮೇಶ್ ಬಾಬು ಬಂಧಿಸಿದ್ದಾರೆ. ಮದ್ರಸದಿಂದ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದು ರಸಾಕ್ ಕಿರುಕುಳ ನೀಡಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.







