ಚಿನ್ನಾಭರಣ ಶೋಭಾಯಾತ್ರೆಯಲ್ಲಿ ಭಸ್ಮಪಾತ್ರೆ ನೀಲೇಶ್ವರದಿಂದ ಸಮರ್ಪಣೆ

ಹೊಸದುರ್ಗ: ಶಬರಿಮಲೆಗೆ ಪಂದಳಂನಿಂದ ಹೊರಡುವ ಚಿನ್ನಾಭರಣ ಶೋಭಾಯಾತ್ರೆಯಲ್ಲಿ ಪಂದಳಂ ಅರಮನೆಯ ಕುಟುಂಬ ಸದಸ್ಯರು ಭಕ್ತರಿಗೆ ನೇರವಾಗಿ ಭಸ್ಮ ನೀಡುವ ಕ್ರಮವಿದೆ. ಇದಕ್ಕಿರುವ ಭಸ್ಮವನ್ನು ಹಾಕಿಡುವ ಪಾತ್ರೆಯನ್ನು ನೀಲೇಶ್ವರ ಕಕ್ಕಾಡ್ ನಿವಾಸಿಗಳಾದ ಪಿ.ಕೆ. ಸಭಾಷ್, ಸಹೋದರ ಎ.ಸಿ. ಸಂತೋಷ್ ಕುಮಾರ್ ಪಂದಳಂಗೆ ತೆರಳಿ ಈ ತಿಂಗಳ 28ರಂದು ಅರಮನೆಗೆ ಸಮರ್ಪಿಸುವರು. ಪ್ರತೀ ವರ್ಷ ಜನವರಿ 12ರಂದು ಪಂದಳಂ ಅರಮನೆಯಿಂದ ಹೊರಡುವ ಚಿನ್ನಾಭರಣ ಶೋಭಾಯಾತ್ರೆಯಲ್ಲಿ ಇವರು ಹಲವು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಪಯ್ಯನ್ನೂರು ಕಂಡೋತ್ ಕೆ. ಶಶಿ ಕುಮಾರ್ ಮುಂಡವಳಪ್ಪಿಲ್ ಈ ಭಸ್ಮ ಪಾತ್ರೆಗೆ ರೂಪು ನೀಡಿದ್ದಾರೆ.

RELATED NEWS

You cannot copy contents of this page