ಕುಂಬಳೆ: ಬಸ್ ಪ್ರಯಾಣ ವೇಳೆ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಬಳೆ ನಿವಾಸಿ ದಯಾನಂದ ಆಚಾರ್ಯರ ಪುತ್ರಿ ಮಿಶಿತಳ ಚಿನ್ನದ ಸರ ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ನಿನ್ನೆ ಸಂಜೆ ಕರ್ನಾಟಕ ಸಾರಿಗೆ ಬಸ್‌ಗೆ ದಯಾನಂದ ಆಚಾರ್ಯ, ಪತ್ನಿ ಅಶ್ವಿನಿ ಹಾಗೂ ಪುತ್ರಿ ಹತ್ತಿದ್ದು ಚೌಕಿಗೆ ತಲುಪಿ ಇಳಿಯುವ ವೇಳೆ ನಾಲ್ಕು ಗ್ರಾಂನ ಚಿನ್ನದ ಸರ ನಾಪತ್ತೆಯಾಗಿದೆ. ಕೂಡಲೇ ನಿರ್ವಾಹಕರಿಗೆ ತಿಳಿಸಿ ಹುಡುಕಾಡಿದಾಗ ಸರದ ಕೊಂಡಿ ಪತ್ತೆಯಾಗಿದೆ. ಬಳಿಕ ಅಶ್ವಿನಿ ಕುಂಬಳೆ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.






