ಶಬರಿಮಲೆಗೆ ಕಾಣಿಕೆ ರೂಪದಲ್ಲಿ ಲಭಿಸಿದ ಚಿನ್ನವೂ ಅಪ್ರತ್ಯಕ್ಷ: ಇ.ಡಿ. ತನಿಖೆಯಲ್ಲಿ ಮಹತ್ತರ ಮಾಹಿತಿ ಬಹಿರಂಗ

ಕೊಚ್ಚಿ: ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ದ್ವಾರಪಾಲಕ ಮೂರ್ತಿ ಗಳ ಹಾಗೂ ದ್ವಾರದ ಚೌಕಟ್ಟಿನ ಚಿನ್ನವನ್ನು ಮಾತ್ರವಲ್ಲ ಭಕ್ತರು ಶ್ರೀ ಕ್ಷೇತ್ರಕ್ಕೆ ಕಾಣಿಕೆ ರೂಪದಲ್ಲಿ ಸಲ್ಲಿಸಿರುವ ಚಿನ್ನ ಇತ್ಯಾದಿ ಹಲವು ಅಮೂಲ್ಯ ವಸ್ತುಗಳನ್ನೂ ಕಳವುಗೈಯ್ಯ ಲಾಗಿದೆ ಯೆಂದು ಕ್ಷೇತ್ರದಲ್ಲಿ ನಡೆದ ಕಾಳಧನ ವ್ಯವಹಾರದ ಬಗ್ಗೆ  ತನಿಖೆ ನಡೆಸುತ್ತಿರುವ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ)  ಪತ್ತೆಹಚ್ಚಲಾಗಿದೆ.  ಇದರಿಂ ದಾಗಿ ಶಬರಿಮಲೆಯಲ್ಲಿ ಭಾರೀ ಮಟ್ಟದ ಆರ್ಥಿಕ ಅವ್ಯವಹಾರ ನಡೆದಿದೆಯೆಂದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟಗೊಂ ಡಿದ್ದು  ಆ ಬಗ್ಗೆಯೂ ಆಳವಾದ ರೀತಿಯ ತನಿಖೆ ನಡೆಸಲಾಗುವುದೆಂದು ಇ.ಡಿ ತಿಳಿಸಿದೆ.

2019 ರಿಂದ 2025ರ ತನಕದ ಅವಧಿಯಲ್ಲಿ ಶಬರಿಮಲೆ ದೇಗುಲದಲ್ಲಿ ನಡೆದ ವ್ಯವಹಾರದ ಬಗ್ಗೆ ಪ್ರಾಥಮಿಕ ಮಟ್ಟದ ತನಿಖೆ ನಡೆಸಿದಾಗ ಈ ಅವಧಿಯಲ್ಲಿ ಭಾರೀ ಮಟ್ಟದ ಆರ್ಥಿಕ ಅವ್ಯವಹಾರಗಳು ನಡೆದಿದೆ ಯೆಂಬುವುದು ಸ್ಪಷ್ಟಗೊಳ್ಳುತ್ತಿದೆ.

ಹೊರ ರಾಜ್ಯಗಳಿಂದ ಶಬರಿಮಲೆಗೆ ದರ್ಶನಕ್ಕಾಗಿ ಬರುವ ಶ್ರೀಮಂತರು ಹಾಗೂ ಉದ್ದಿಮೆದಾರರು ಶ್ರೀ ಅಯ್ಯಪ್ಪ ದೇವರಿಗೆ ಕಾಣಿಕೆ ರೂಪದಲ್ಲಿ ಚಿನ್ನದೊಡವೆಗಳು ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಸಮರ್ಪಿಸುತ್ತಾರೆ. ಇದ್ಯಾವುದನ್ನೂ ಮುಜರಾಯಿ ಮಂಡಳಿಯ ಆದಾಯದಲ್ಲಿ  ಮಾತ್ರವಲ್ಲ ಸಂಬಂಧಪಟ್ಟ ದಾಖಲುಪತ್ರಗಳಲ್ಲೂ ದಾಖಲಿಸದೆ ಅವುಗಳನ್ನು ಲಪಟಾಯಿ ಸಲಾಗಿದೆಯೆಂದು  ಇ.ಡಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಲಾ ಗಿದೆ. ಇದರ ಹೊರತಾಗಿ ಶಬರಿಮಲೆಯ ಪೂಜೆಗಳು, ಲಭಿಸುವ ಆದಾಯಗಳು, ಗುತ್ತಿಗೆ ವ್ಯವಹಾರಗಳಲ್ಲೂ ವ್ಯಾಪಕ ಅವ್ಯವಹಾರ ನಡೆದಿದೆ.  ಕಾಳಧನ ಬಿಳುಪುಗೊಳಿಸುವಿಕೆ  (ಪಿಎಂಎಲ್‌ಎ)  ಕಾನೂನು ಪ್ರಕಾರ ಈಬಗ್ಗೆ ತನಿಖೆ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದ  ದಾಖಲುಪತ್ರಗಳು ಹಾಗೂ ಪುರಾವೆಗಳನ್ನು ಸಂಗ್ರಹಿಸುವ ಕ್ರಮವನ್ನು ಇ.ಡಿ ಆರಂಭಿಸಿದೆ.

ಶಬರಿಮಲೆ ದೇವಸ್ಥಾನದಲ್ಲಿ ನಡೆದ ಕಾಳಧನ ವ್ಯವಹಾರದ ಬಗ್ಗೆ ಕೇರಳ, ಕರ್ನಾಟಕ, ತಮಿಳುನಾಡಿನ 21 ಕೇಂದ್ರಗಳು ಹಾಗೂ  ತಿರುವನಂತಪುರ ದಲ್ಲಿರುವ ತಿರುವಿದಾಂಕೂರು ಮುಜರಾಯಿ ಮಂಡಳಿಗೆ ಇ.ಡಿ ನಿನ್ನೆ ದಾಳಿ ನಡೆಸಿತ್ತು.ಅದು ಇನ್ನೂ ಮುಂದುವರಿಯುತ್ತಿದೆ.

You cannot copy contents of this page