24 ಮಹಿಳೆಯರು ಸೇರಿದ ತಂಡದಿಂದ 29.39 ಕಿಲೋ ಚಿನ್ನ ವಶ

ಮುಂಬಯಿ: 24 ಮಹಿಳೆಯರು ಸೇರಿದ ತಂಡ ಸಾಗಿಸುತ್ತಿದ್ದ 29.39 ಕಿಲೋ ಚಿನ್ನಾಭರಣವನ್ನು ರೆವೆನ್ಯೂ ಇಂಟೆಲಿಜೆನ್ಸ್ ಡೈರೆಕ್ಟರೇಟ್ ಮುಂಬಯಿ ವಿಮಾನ ನಿಲ್ದಾಣ ದಿಂದ ವಶಪಡಿಸಿದೆ. ಸೆರೆ ಹಿಡಿದ ಚಿನ್ನಕ್ಕೆ 37.74 ಕೋಟಿ ರೂ. ಮೌಲ್ಯ ಅಂದಾಜಿಸಲಾಗಿದೆ. ಡಿಆರ್‌ಐ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವರ್ಷ ಮುಂಬಯಿ ವಿಮಾನ ನಿಲ್ದಾಣ ದಲ್ಲಿ ನಡೆಸಿದ ಅತ್ಯಂತ ದೊಡ್ಡ ಚಿನ್ನ ಬೇಟೆಯಾಗಿದೆ ಇದು. ಕೆನಿಯಾದ ನೈರೋ ಬಿಯಿಂದ ಮಹಿಳೆಯರ ತಂಡವೊಂದು ಚಿನ್ನಾಭರಣದೊಂದಿಗೆ ಮುಂ ಬಯಿ ಛತ್ರಪತಿ ಶಿವಜಿ ಮಹಾ ರಾಜ್ ಅಂತಾರಾಷ್ಟ್ರ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ ಎಂಬ ಸೂಚನೆ ಹಿನ್ನೆಲೆಯಲ್ಲಿ ಕಾದು ನಿಂತ ರೆವೆನ್ಯೂ ಇಂಟೆಲಿ ಜೆನ್ಸ್ 24 ವಿದೇಶ ಮಹಿಳೆಯ ರನ್ನು ತಡೆದು ನಿಲ್ಲಿಸಿ ಇವರ ಬ್ಯಾಗ್‌ಗಳಲ್ಲಿ, ಬಟ್ಟೆಬರೆಗಳಲ್ಲಿ ಅಡಗಿಸಿಟ್ಟಿದ್ದ 25.1 ಕಿಲೋ ಚಿನ್ನದ ಗಟ್ಟಿಗಳು, 4.27 ಕಿಲೋ ಚಿನ್ನಾಭರಣಗಳನ್ನು ಪತ್ತೆಹಚ್ಚಿದ್ದಾರೆ. ಈ ತಂಡದ ಹಿಂದೆ ಇನ್ಯಾರಾದ ರೂ ಶಾಮೀ ಲಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸುತ್ತಿ ರುವುದಾಗಿ ಡಿಆರ್‌ಐ ತಿಳಿಸಿದೆ

RELATED NEWS

You cannot copy contents of this page